ಬೂದಿಕೋಟೆ: ಹೋಬಳಿಯ ಗಡಿ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಅಪಾರ ಪ್ರಮಾಣದ ಟೊಮ್ಯಾಟೊ, ಚೆಂಡು ಹೂ, ಸಜ್ಜೆ, ರಾಗಿ, ಜೋಳ, ನೀರಿನ ಪೈಪ್‌ಗಳು ನಾಶವಾಗಿವೆ.
ಕಳೆದೊಂದು ತಿಂಗಳಿಂದ ಹೋಬಳಿಯಲ್ಲಿ ಬೀಡು ಬಿಟ್ಟಿರುವ ಆನೆಗಳ ಗುಂಪು ಬಲಮಂದೆ ಗ್ರಾಪಂ ವ್ಯಾಪ್ತಿಯ ಭೀಮಗಾನಹಳ್ಳಿಯಲ್ಲಿ ಶುಕ್ರವಾರ ಮುಂಜಾನೆ 5ಕ್ಕೆ ದಾಳಿ ಮಾಡಿ ರೈತ ನಾರಾಯಣಪ್ಪ ಅವರ ಒಂದು ಎಕರೆ ಚೆಂಡು ಹೂವು, ನಾಗಪ್ಪ ಎಂಬುವವರ ಒಂದು ಎಕರೆ ಟೊಮ್ಯಾಟೊ, ಗುಂಡಪ್ಪ ಅವರ ಎರಡು ಎಕರೆ ಟೊಮ್ಯಾಟೊ, ನೀರಿನ ಪೈಪು, ಾರಂ ಹುಲ್ಲು, ಗಾಡೆಪ್ಪ ಅವರ ಒಂದು ಎಕರೆ ಟೊಮ್ಯಾಟೊ, ವೆಂಕಟೇಶಪ್ಪ ಅವರ ಎರಡು ಎಕರೆ ಸಜ್ಜೆ ಸೇರಿ ಇತರ ಬೆಳೆಗಳನ್ನು ನಾಶಮಾಡಿವೆ.
ರೈತರು ಮಾಹಿತಿ ನೀಡಿದರೂ ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.