ಜಿಲ್ಲೆ

ಕಡಮಕಲ್ಲು ಎಸ್ಟೇಟ್‌ನಲ್ಲಿ ಭೂಕುಸಿತ, ತುಂಬಿ ಹರಿಯುತ್ತಿದೆ ನದಿ ನೀರು, ಕೊಚ್ಚಿ ಬಂದಿದೆ ಮಣ್ಣು, ಮರ

Dakshina Kannada

ಸುಬ್ರಹ್ಮಣ್ಯ: ಕಡಮಕಲ್ಲು ಎಸ್ಟೇಟ್‌ನಲ್ಲಿ ಭಾನುವಾರ ರಾತ್ರಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿ ನದಿ ನೀರು ತುಂಬಿ ಹರಿಯುತ್ತಿದೆ. ನದಿಯಲ್ಲಿ ಮಣ್ಣು ಸಹಿತ ನೀರು ತುಂಬಿ ಹರಿಯುತ್ತಿದ್ದು, ಮರಗಳು ಕೊಚ್ಚಿ ಬಂದು ಕಿಂಡಿ ಅಣೆಕಟ್ಟುಗಳಲ್ಲಿ ತುಂಬಿದೆ. ಕಲ್ಮಕಾರಿನ ಬೈಲು ಎಂಬಲ್ಲಿ ಕಿಂಡಿ ಅಣೆಕಟ್ಟು ಸಂಪೂರ್ಣ ಮರಗಳಿಂದ ತುಂಬಿದೆ. ಉಪ್ಪುಕಳ ಭಾಗದಲ್ಲೂ ಮಳೆಯಾಗಿದ್ದು, ಉಪ್ಪುಕಳದ ಕಾಲು ಸೇತುವೆ ಮೂರನೇ ಭಾರಿಗೆ ಕೊಚ್ಚಿ ಹೋಗಿದೆ.