ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ಜೆ.ಪಿ.ನಗರ ಶರಣ ವೇದಿಕೆ ಹಾಗೂ ಅರಿವಿನ ಮನೆ ಮಹಿಳಾ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ‘ಕದಳಿ ಯಾತ್ರೆ’ಗೆ ಪುಟ್ಟರಾಜ ಗವಾಯಿಗಳ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮುಖಾಂತರ ಚಾಲನೆ ನೀಡಲಾಯಿತು.
ಜೆ.ಪಿ.ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಅಕ್ಕಮಹಾದೇವಿ ಪ್ರತಿಮೆ ಮುಂಭಾಗದಲ್ಲಿ ಯಾತ್ರೆಯನ್ನು ಸಂಪನ್ನಗೊಳಿಸಲಾಯಿತು. ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಶಾಸಕ ಟಿ.ಎಸ್.ಶ್ರೀವತ್ಸ, ನಗರ ಪಾಲಿಕೆ ಸದಸ್ಯರಾದ ಶಾರದಮ್ಮ ಈಶ್ವರ್, ಶಾಂತಮ್ಮ ವಡಿವೇಲು, ಮುಖಂಡರಾದ ಮ.ಗು.ಸದಾನಂದಯ್ಯ, ಶಾರದಾ ಶಿವಲಿಂಗ ಸ್ವಾಮಿ, ಪುಟ್ಟರಾಜಪ್ಪ, ನಾಗೇಂದ್ರಕುಮಾರ್, ಮಹದೇವಸ್ವಾಮಿ, ನಂದೀಶ್, ಸುಧಾಕರ್, ಪರಮೇಶ್ವರಪ್ಪ, ಸದಾಶಿವು, ಚಂದ್ರಶೇಖರ್ ಇತರರಿದ್ದರು.
ಸುಮಾರು 300 ಜನ ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿ ವಚನಾಮೃತವನ್ನು ಹಾಡಿ ಯಾತ್ರೆಯನ್ನು ಸಂಪನ್ನಗೊಳಿಸಿದರು.