ಜಿಲ್ಲೆ

ಕಡಬ ಸೀಬೆ ಮರದಿಂದ ಬಿದ್ದು ಬಾಲಕ ಮೃತ್ಯು

reportermng

ಕಡಬ : ಶಾಲೆ ಮುಗಿಸಿ ಮನೆಗೆ ಬಂದ ಬಾಲಕನೊಬ್ಬ ಸೀಬೆ ಹಣ್ಣಿನ ಮರ ಹತ್ತಲು ಹೋಗಿ ಉರುಳಿ ಬಿದ್ದು ಮೃತಪಟ್ಟ ಧಾರುಣ ಘಟನೆ ಕಡಬ ತಾಲೂಕಿನ ಕಾಣಿಯೂರು ಸಮೀಪದ ದೋಳ್ಪಾಡಿ ಬಳಿ ಗುರುವಾರ ಸಂಜೆ ನಡೆದಿದೆ.

ದೋಳ್ಪಾಡಿ ಮರಕ್ಕಡ ನಿವಾಸಿ ದಿವಾಕರ ಗೌಡ ಎಂಬವರ ಪುತ್ರ ಉಲ್ಲಾಸ್ ಡಿ.ಎಂ (8 ವ.) ಮೃತ ಬಾಲಕ.

ದೋಳ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಯಾಗಿದ್ದ.

ಉಲ್ಲಾಸ್ ಎಂದಿನಂತೆ ಮಾ.17ರಂದು ಕೂಡ ಶಾಲೆಗೆ ಹೋಗಿದ್ದು ಸಂಜೆ ಮನೆಗೆ ಹಿಂತಿರುಗಿದ್ದಾನೆ. ಮನೆಗೆ ಬಂದ ಬಳಿಕ ಮನೆ ಸಮೀಪದ ಸೀಬೆ ಹಣ್ಣು ಕೊಯ್ಯಲು ಮರಕ್ಕೆ ಹತ್ತಿದ್ದು ಈ ವೇಳೆ ಅಯತಪ್ಪಿ ಕೆಳಕ್ಕೆ ಉರುಳಿದಾಗ ತಲೆ ಭಾಗಕ್ಕೆ ಏಟಾಗಿ ರಕ್ತ ಸ್ರಾವ ಉಂಟಾಗಿತ್ತು ತಕ್ಷಣ ಕಡಬ ಸರ್ಕಾರಿ ಸಮೂದಾಯ ಅಸ್ಪತ್ರೆಗೆ ಸಾಗಿಲಾಯಿತಾದರೂ ಅದಾಗಲೇ ಮೃತಪಟ್ಟಿದ್ದಾನೆ.

ಮೃತ ಉಲ್ಲಾಸ್ ತಂದೆ ದಿವಾಕರ್, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.