ಜಿಲ್ಲೆ

ಪ್ರಿಯಕರನ ಮೊಬೈಲ್ ಸ್ವಿಚ್ ಆಫ್.. ಹಾಸನ ಮೂಲದ ಯುವತಿ ಕಡಬದಿಂದ ನಾಪತ್ತೆ!

Mangaluru - Nishantha Narayana

ಕಡಬ: ಯುವತಿಯೊಬ್ಬಳು ಬಾಡಿಗೆ ಮನೆಯಿಂದ ನಾಪತ್ತೆಯಾಗಿದ್ದು, ಪ್ರಿಯಕರನ ಮೊಬೈಲ್ ಸ್ವಿಚ್ ಆಫ್ ಆಗಿರುವ ಬಗ್ಗೆ ಸಹೋದರ ಕಡಬ ಠಾಣೆಗೆ ದೂರು ನೀಡಿದ್ದಾರೆ.

ಹಾಸನ ಜಿಲ್ಲೆ ಬೇಲೂರು ತಾಲೂಕು ಹಗರೆ ಅಂಗಡಿಹಳ್ಳಿ ನಿವಾಸಿ ಕಡಬ ತಾಲೂಕು ಕಡಬ ಗ್ರಾಮದ ಕಳಾರ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ರಕ್ಷಿತಾ (18) ನಾಪತ್ತೆಯಾದವಳಾಗಿದ್ದಾರೆ.

ಕಡಬಕ್ಕೆ ಬಂದು ಸುಮಾರು ೬ ವರ್ಷಗಳಾಗಿದ್ದು, ಕಳಾರ ಎಂಬಲ್ಲಿರುವ ಇಸ್ಮಾಯಿಲ್ ಎಂಬವರ ಬಾಡಿಗೆ ಮನೆಯಲ್ಲಿ ತಂದೆ, ತಾಯಿ ಅಕ್ಕ, ತಂಗಿಯವರೊಂದಿಗೆ ವಾಸವಾಗಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಕಾಣೆಯಾದ ರಕ್ಷಿತಾಳಿಗೆ 18 ವರ್ಷ 2 ತಿಂಗಳು ಆಗಿದ್ದು, 10ನೇ ತರಗತಿ ವಿದ್ಯಾಬ್ಯಾಸ ಮಾಡಿ 3 ವರ್ಷದಿಂದ ಮನೆಯಲ್ಲಿಯೇ ಮನೆ ಕೆಲಸ ಮಾಡಿಕೊಂಡಿರುತ್ತಾಳೆ. ಜೂ.20ರಂದು ಬೆಳಗ್ಗೆ 12 ಗಂಟೆಗೆ ಮನೆಯಿಂದ ಹೋದವಳು ಇದುವರೆಗೆ ಮನೆಗೆ ಬಾರದೆ, ಬೇಲೂರು ತಾಲೂಕಿನ ಹಗರೆ ಎಂಬಲ್ಲಿಗೆ ಹೋಗದೆ ನಾಪತ್ತೆಯಾಗಿದ್ದಾಳೆ. ರಕ್ಷಿತಾ ಸಂಬಂಧಿಕ ರವಿ ಎಂಬಾತನನ್ನು ಪ್ರೀತಿಸುತ್ತಿದ್ದು, ಸದ್ಯ ಆತನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಯಾವುದೇ ಮಾಹಿತಿ ಪತ್ತೆ ಸಾಧ್ಯವಾಗಿಲ್ಲ ಎಂದು ಸಹೋದರ ಸುನಿಲ್ ದೂರಿನಲ್ಲಿ ತಿಳಿಸಿದ್ದಾರೆ.