ಜಿಲ್ಲೆ

ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಕಾರ‌್ಯಕರ್ತರ ಕಡೆಗಣನೆ : ಕೊಯಿಲ, ರಾಮಕುಂಜದಲ್ಲಿ ಸಾಮೂಹಿಕ ರಾಜೀನಾಮೆ ಎಚ್ಚರಿಕೆ

ಕಡಬ: ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಕ್ಷದ ಕಾರ‌್ಯಕರ್ತರನ್ನು ಸಂಪೂರ್ಣ ಕಡೆಗಣಿಸಿ, ಅಧಿಕಾರ ದುರುಪಯೋಗಪಡಿಸುತ್ತಿದ್ದಾರೆ. ಕೊಯಿಲ, ರಾಮಕುಂಜ ಗ್ರಾಮದ ಕಾರ‌್ಯಕರ್ತರ ಯಾವುದೇ ಬೇಡಿಕೆಗೆ ಸ್ಪಂದಿಸುತ್ತಿಲ್ಲ, ಈ ಗ್ರಾಮದ ಪಕ್ಷ ಕಾರ‌್ಯಕರ್ತರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕೆಪಿಸಿಸಿ ಸಂಯೋಜಕ, ಸುಳ್ಯ ವಿಧಾನ ಸಭಾ ಕ್ಷೇತ್ರ ಉಸ್ತುವಾರಿ ಜಿ.ಕೃಷ್ಣಪ್ಪ ರಾಮಕುಂಜ ಅವರನ್ನು ಭೇಟಿ ಮಾಡಿದ ಕೊಯಿಲ ಮತ್ತು ರಾಮಕುಂಜ ಗ್ರಾಮದ ಪಕ್ಷ ಕಾರ‌್ಯಕರ್ತರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅಧ್ಯಕ್ಷರಾಗಿ ವರ್ಷವಾದರೂ ಗ್ರಾಮಕ್ಕೆ ಬಂದು ಸಭೆ ನಡೆಸಿಲ್ಲ, ಬೇಡಿಕೆ ಇಟ್ಟರೆ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ, ಪಕ್ಷದ ಕಾರ‌್ಯಕ್ರಮಗಳ ಮಾಹಿತಿ ನೀಡುತ್ತಿಲ್ಲ, ಮುಂದೆ ಗ್ರಾಪಂ ಚುನಾವಣೆ ನಡೆಯಲಿದ್ದರೂ ಯಾವೊಬ್ಬ ಕಾರ‌್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ದೂರುಗಳಿವೆ.

ರಾಮಕುಂಜ ಗ್ರಾಪಂ ಸದಸ್ಯ ಯತೀಶ್ ಬಾನಡ್ಕ, ಕೊಯಿಲ ಗ್ರಾಪಂ ಸದಸ್ಯ ನಜೀರ್ ಪೂರಿಂಗ, ಕೆಡಿಪಿ ಸದಸ್ಯ ಮೋನಪ್ಪ, ಗ್ಯಾರಂಟಿ ಸಮಿತಿ ಸದಸ್ಯ ಎ.ಕೆ.ಬಶೀರ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿ.ಮಹಮ್ಮದ್ ರಫೀಕ್, ಎಸ್.ಅಬ್ದುಲ್ ರಹಿಮಾನ್, ಯುವಕ ಕಾಂಗ್ರೆಸ್‌ನ ರಾಜಿಕ್ ಆತೂರು, ಕರುಣಾಕರ ರಾಮಕುಂಜ ಇದ್ದರು.