ಬ್ರಹ್ಮಾವರ: ಕಚ್ಚೂರು ಶ್ರೀ ಮಾಲ್ತಿದೇವಿ ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರ ಜಾತ್ರಾ ಮಹೋತ್ಸವ ಜ.17ರಿಂದ 21ರವರೆಗೆ ವಿವಿಧಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಜರುಗಲಿದೆ.
ಜ.17ರಂದು ಸಂಜೆ 3.30ಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ ಬಾರ್ಕೂರು ಕಲ್ಲು ಚಪ್ಪರದ ಬಳಿಯಿಂದ ಜರುಗಲಿದೆ. ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಆಡಳಿತ ಮೊಕ್ತೇಸರ ಬಿ.ಎನ್.ಶಂಕರ ಪೂಜಾರಿ, ಧಾರ್ಮಿಕ ಮುಖಂಡ ಪ್ರೇಮಾನಂದ ಶೆಟ್ಟಿ ಕಟ್ಕೇರೆ ಬಾರ್ಕೂರು, ಗ್ರಾಪಂ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಂಜೆ 5.30ಕ್ಕೆ ಉಡುಪಿ ನಗರಸಭೆ ಸದಸ್ಯ ವಿಜಯ ಕೊಡವೂರು ಭಜನಾ ಸಂಕೀರ್ತನಾ ಕಾರ್ಯಕ್ರಮ ಉದ್ಘಾಟಿಸುವರು.
18ರಂದು ಬೆಳಗ್ಗೆ ದರ್ಶನ ಸೇವೆ, ಸಾಮೂಹಿಕ ಆಶ್ಲೇಷಾ ಬಲಿ, ಸಂಜೆ 6.30ಕ್ಕೆ ದೀಪೋತ್ಸವವನ್ನು ಉಡುಪಿ ಪೋಲಿಸ್ ಸಹಾಯಕ ಉಪನಿರೀಕ್ಷಕ ಜಯಕರ ಐರೋಡಿ ಉದ್ಘಾಟಿಸಲಿದ್ದು, 6.45ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಬಾರ್ಕೂರು ಮೊಗವೀರ ಸಂಯುಕ್ತ ಸಭಾ ಬೆಣ್ಣೆಕುದ್ರು ಅಧ್ಯಕ್ಷ ಸತೀಶ್‌ಎಸ್.ಅಮೀನ್ ಉದ್ಘಾಟಿಸಲಿದ್ದಾರೆ. ಕಾರ್ತಿಕ್‌ರಾಜ್ ಸಾಸ್ತಾನ, ವಿನ್ಯಾಸ ಮಧ್ಯ ಸುರತ್ಕಲ್ ತಂಡದಿಂದ ಗಾನ ನೃತ್ಯ ವೈಭವ, ಶ್ರೀ ಮಹಾಗಣಪತಿ ಮಹಾಕಾಳಿ ಯಕ್ಷಗಾನ ಮಂಡಳಿ ಹಿರಿಯಡ್ಕದಿಂದ ಯಕ್ಷಗಾನ, ರಾತ್ರಿ 11ರಿಂದ ಗೆಂಡೋತ್ಸವ ಜರುಗಲಿದೆ.
19ರಂದು ಬೆಳಗ್ಗೆ ಡಾ.ಗಣೇಶ್ ಗಂಗೊಳ್ಳಿ ತಂಡದಿಂದ ಭಕ್ತಿ ಸಂಗೀತ 11 ಗಂಟೆಯಿಂದ ಸಾಮೂಹಿಕ ವಿವಾಹ, ಅನ್ನಸಂತರ್ಪಣೆ, ಸಭಾ ಕಾರ್ಯಕ್ರಮ, ಮಧ್ಯಾಹ್ನ 2ರಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಅಪ್ಪಗೆರೆತಿಮ್ಮರಾಜು, ಬೆಂಗಳೂರು ಅವರಿಂದ ಜನಪದ ಸಂಗೀತ ಸಂಜೆ ರಥೋತ್ಸವ, ತೆಪ್ಪೋತ್ಸವ, 20ರಂದು ಬೆಳಗ್ಗೆ ತುಲಾಭಾರ ಸೇವೆ, 21ರಂದು ಬೆಳಗ್ಗೆ ಕೊರಗಜ್ಜ ದರ್ಶನ ಸೇವೆ ಜರುಗಲಿದೆ.
19ರಂದು ಮಧ್ಯಾಹ್ನ 12.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬಾರ್ಕೂರು ಸಂಸ್ಥಾನ ಡಾ.ವಿಶ್ವ ಸಂತೋಷ್ ಭಾರತಿ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಕರ್ನಾಟಕ ಸರ್ಕಾರ ವಿಧಾನ ಪರಿಷತ್ ವಿಪಕ್ಷ ನಾಯಕ ನಾರಾಯಣಸ್ವಾಮಿ ಉದ್ಘಾಟಲಿಸಿದ್ದು, ದೇವಳ ಧರ್ಮದರ್ಶಿ ಗೋಕುಲ್‌ದಾಸ್ ಬಾರ್ಕೂರು ಉಪಸ್ಥಿತಿಯಲ್ಲಿ ದೇವಳ ಅಧ್ಯಕ್ಷ ಶಿವಪ್ಪ ನಂತೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರತಿಭಾ ಪುರಸ್ಕಾರ ನೆರವೇರಿಸಲಿದ್ದಾರೆ. ಶಾಸಕ ಯಶ್‌ಪಾಲ್ ಎ.ಸುವರ್ಣ ಸಹಾಯಧನ ವಿತರಿಸಲಿದ್ದು, ಶಾಸಕರಾದ ಕಿರಣ್‌ಕುಮಾರ್ ಕೊಡ್ಗಿ, ಐವನ್ ಡಿಸೋಜ, ಸಿಮೆಂಟ್ ಮಂಜು, ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ಮಾಜಿ ಶಾಸಕ ಕೆ.ರಘುಪತಿ ಭಟ್, ಕಲಾಕ್ಷೇತ್ರ ಕುಂದಾಪುರ ಅಧ್ಯಕ್ಷ ಕಿಶೋರ್‌ಕುಮಾರ್ ಕುಂದಾಪುರ, ಚಾರ್ಟರ್ಡ್ ಅಕೌಂಟೆಂಟ್ ಕೆ.ಪದ್ಮನಾಭ ಕಾಂಚನ್, ಪ್ರಮುಖರಾದ ಪಿ.ಬಾಬು ಮಲ್ಲಾರ್ ಸೂಟರ್‌ಪೇಟೆ, ಹರಿಶ್ಚಂದ್ರ, ಶಿವರಾಜ್ ಮಲ್ಲಾರ್, ಪ್ರದೀಪ್ ಕಾಪಿಕಾಡ್, ಮಂಜುನಾಥ ಕರ್ಕೇರ, ಮಂಜುನಾಥ್ ತವರುಮನೆ, ರಾಜು ಹೆಜಮಾಡಿ, ಗಣೇಶ್ ನೆರ್ಗಿ, ಜಲಜಾಕ್ಷಿ ತಮ್ಮಯ್ಯ ಕಿನ್ನಿಮೂಲ್ಕಿ, ರವೀಂದ್ರ ಸಾಲ್ಯಾನ್ ಪಡುಬಿದ್ರಿ ಭಾಗವಹಿಸಲಿದ್ದಾರೆ. ಹಿರಿಯ ಸಮಾಜಸೇವಕ ಕರುಣಾಕರ ಮಾಸ್ತರ್‌ಮಲ್ಪೆ ಮತ್ತು ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ಸಮಾಜಸೇವಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಬಾರ್ಕೂರು ತಿಳಿಸಿದ್ದಾರೆ.