ತಾಳೂರು ಪ್ರಾಥಮಿಕ ಸಹಕಾರ ಸಂಘಕ್ಕೆ ಆಯ್ಕಯಾದ ನೂತನ ನಿರ್ದೇಶಕರನ್ನು ಕಬ್ಬಿನಹಳ್ಳಿ ಜಗದೀಶ್, ಗ್ರಾಮಸ್ಥರು ಅಭಿನಂದಿಸಿದರು. 
ಜಿಲ್ಲೆ

ಕಬ್ಬಿನಹಳ್ಳಿ ಜಗದೀಶ್ ಬಣ ಮೇಲುಗೈ

ಆಲೂರು: ತಾಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಬಣ 12 ಸ್ಥಾನ ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದೆ.

ಸಂಘದಲ್ಲಿ ಒಟ್ಟು 12 ಸದಸ್ಯರ ಬಲವಿದ್ದು, ಹಿಂದುಳಿದ ವರ್ಗ-ಎ ಮೀಸಲು ಸ್ಥಾನಕ್ಕೆ ಟಿ.ಬಿ ರಾಜಶೇಖರ್, ಹಿಂದುಳಿದ ವರ್ಗ-ಬಿ ಸ್ಥಾನಕ್ಕೆ ಎಸ್.ಆರ್ ಹರೀಶ್, ಮಹಿಳಾ ಮೀಸಲು ಸ್ಥಾನದಿಂದ ವಸಂತಮ್ಮ ಹಾಗೂ ನೀಲಮ್ಮ ಮತ್ತು ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ರತ್ನಮ್ಮ ಅವಿರೋಧವಾಗಿ ಆಯ್ಕೆಯಾದರು.

ಇನ್ನುಳಿದ 7 ಸ್ಥಾನಗಳಿಗೆ 14 ಜನರು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ಅನಿವಾರ್ಯವಾಗಿತ್ತು. ಈ ಪೈಕಿ ಸಾಲಗಾರರ ಕ್ಷೇತ್ರದಿಂದ ಸಾಮಾನ್ಯ ಸ್ಥಾನದಿಂದ ಸ್ಪರ್ಧೆ ಮಾಡಿದ್ದ ಸಿ.ಎಂ.ಶ್ರೀನಿವಾಸ್ 255, ಎಂ.ಜಿ.ಸೋಮಶೇಖರ್ 256, ಜಿ.ಕೆ.ವೆಂಕಟೇಶ್ 186, ಬಿ.ವೈ.ಶಿವೇಗೌಡ 173, ಟಿ.ಇ ಧರ್ಮ 153, ಮಂಜುನಾಥ್ 216 ಮತ ಪಡೆದರೆ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಎಚ್.ಆರ್. ಮಂಜುನಾಥ್ 16 ಮತ ಪಡೆಯುವ ಮೂಲಕ ಆಯ್ಕೆಯಾದರು.

ಸಾಲಗಾರರಲ್ಲದ ಕ್ಷೇತ್ರದಿಂದ ಎಚ್.ಮಂಜುನಾಥ್ 16 ಮತ ಪಡೆದು ಆಯ್ಕೆಯಾದರು. ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಉಮೇಶ್ ಬೆಳ್ಳಾವರ 114, ಕೇಶವೇಗೌಡ ಸಮುದ್ರವಳ್ಳಿ 108, ಪುಟ್ಟಸ್ವಾಮಿಗೌಡ ಜಿ.ಜಿ.ಕೊಪ್ಪಲು 10, ಬಸವಲಿಂಗಪ್ಪ ನಿಲುವಾಗಿಲು 106, ಮಲ್ಲೇಶ್ ಜಿ.ಜಿ ಕೊಪ್ಪಲು 82, ಮಂಜೇಗೌಡ ತಾಳೂರು 132, ಪುಟ್ಟರಂಗನಾಥ ಬೆಳ್ಳಾವರ 142, ಪ್ರೇಮಾ ಕುಮಾರ್ ಬೆಳ್ಳಾವರ 3, ಯೋಗೇಶ ಜಿ.ಜಿ.ಕೊಪ್ಪಲು 6 ಮತ ಪಡೆಯುವ ಮೂಲಕ ಸೋಲುಂಡರು.

ನೂತನ ನಿರ್ದೇಶಕರನ್ನು ಕಬ್ಬಿನಹಳ್ಳಿ ಜಗದೀಶ್ ಸೇರಿದಂತೆ ಗ್ರಾಮಸ್ಥರು ಅಭಿನಂದಿಸಿದರಲ್ಲದೆ, ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಚುನಾವಣಾಧಿಕಾರಿಯಾಗಿ ಕುಮಾರ್ ಕರ್ತವ್ಯ ನಿರ್ವಹಿಸಿದರು. ತಾಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಸುರೇಶ್, ತಾಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಉಷಾ ಹರೀಶ್, ಸದಸ್ಯ ಷಡಕ್ಷರಿ, ಕಟ್ಟಡ ಕಾರ್ಮಿಕ ಸಂಘದ ಆಲೂರು ತಾಲೂಕು ಅಧ್ಯಕ್ಷ ಆನಂದ್ ಇತರರಿದ್ದರು.