ಜಿಲ್ಲೆ

ಕಬ್ಬಿಗರ ಕೂಟದಲ್ಲಿ ಸಾಧಕರಿಗೆ ಸನ್ಮಾನ

Gadag - Shivanand Hiremath

ಗದಗ: ಸನ್ಮಾನ ಔಪಚಾರಿಕವಾಗಿರದೇ ಸಾಧನೆಗೆ ಒರೆಗಲ್ಲಾಗಬೇಕೆಂದು ನ್ಯಾಯವಾದಿ ನೋಟರಿ ಕಬ್ಬಿಗರ ಕೂಟದ ಅಧ್ಯಕ್ಷ ಮನೋಹರ ಮೇರವಾಡೆ ಹೇಳಿದರು. ಅವರು ಕಬ್ಬಿಗರ ಕೂಟದಲ್ಲಿ ಏರ್ಪಡಿಸಿದ್ದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ನೆರವೇರಿಸಿ ಮಾತನಾಡಿದರು.
ಸರಕಾರಿ ವೈದ್ಯರಾಗಿದ್ದುಕೊಂಡು ಇಲಾಖೆಯ ವತಿಯಿಂದ ವೇತನದೊಂದಿಗೆ ಎಂ.ಡಿ. ಪದವಿಯನ್ನು ಉನ್ನತ ದರ್ಜೆಯಲ್ಲಿ ಪೂರೈಸಿ ತಾವು ಕಲಿತ ವೈದ್ಯಕೀಯ ಸಂಸ್ಥೆಗೆ ಪ್ರಥಮ ಸ್ಥಾನ ಪಡೆದ ಚಿಕ್ಕೋಡಿಯ ಡಾ. ಸಂತೋಷ ಪತ್ತಾರ, ೭೧ ವರ್ಷ ಪೂರೈಸಿ ೭೨ ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ ಪ್ರಸಿದ್ಧ ಕಥೆಗಾರ ಕಬ್ಬಿಗರ ಕೂಟದ ಪ್ರಚಾರ ಸಮಿತಿ ಅಧ್ಯಕ್ಷ ಬಸವರಾಜ ಗಣಪ್ಪನವರ ಹಾಗೂ ಬರವಣಿಗೆಯಲ್ಲಿ ತೊಡಗಿ ೫೦ ವರ್ಷಗಳನ್ನು ಪೂರೈಸಿದ ಕಬ್ಬಿಗರ ಕೂಟದ ಸಂಸ್ಥಾಪಕ ಡಿ.ವಿ. ಬಡಿಗೇರ ಅವರನ್ನು ಕಬ್ಬಿಗರ ಕೂಟದ ಕವಿ ಬಳಗದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕವಿಗಳ ಗುರು ಎಂದು ಹಿರಿಯ ಸಾಹಿತಿ ಡಿ.ವಿ.ಬಡಿಗೇರ ಅವರನ್ನು ಹಾಗೂ ಇತರ ಸಾಧಕರನ್ನು ಸನ್ಮಾನ ಸಮಾರಂಭದಲ್ಲಿ ಅಭಿನಂದಿಸಲಾಯಿತು.
ಪತ್ರಕರ್ತ ಅಂದಾನೆಪ್ಪ ವಿಭೂತಿ, ಪ್ರೊಬಸ್ ಕ್ಲಬ್ ಅಧ್ಯಕ್ಷ ಬಸವರಾಜ ತೋಟಗೇರ, ಕೊತ್ತಲ ಮಹಾದೇವಪ್ಪ, ಬಿ.ಎಸ್. ಹಿಂಡಿ, ಮಲ್ಲಿಕಾರ್ಜುನ ಪೂಜಾರ, ವಿ.ಎಂ. ಪವಾಡಿಗೌಡರ, ಜಯಶ್ರೀ ಅಂಗಡಿ, ಸುಭದ್ರಾ ಬಡಿಗೇರ, ಮಂಜುಶ್ರೀ ಪತ್ತಾರ, ಮಂಜುಳಾ ವೆಂಕಟೇಶಯ್ಯ, ಬಯಲಾಟ ಕಲಾವಿದ ಪ್ರಕಾಶ ಬಡಿಗೇರ, ಶಿಕ್ಷಕಿ ನೀಲಮ್ಮ ಅಂಗಡಿ, ಅನಸೂಯಾ ಮಿಟ್ಟಿ, ಶಾರದಾ ಬಾಣದ, ಗೀತಾ ಹೂಗಾರ, ಶ್ರೀಕಾಂತ ಬಡಿಗೇರ, ಮೇಘಾ ಮುಧೋಳ, ಎಸ್.ಎಸ್. ಮಲ್ಲಾಪೂರ ಮುಂತಾದವರು ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.