ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಫ್ಲಾಟ್ ಫಾರ್ಮ್ ೧ರಲ್ಲಿ ಶೆಲ್ಟರ್ ನಿರ್ಮಾಣಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಶಿಲಾನ್ಯಾಸ ನೆರವೇರಿಸಿದರು. ಲೀಲಾವತಿ ಅಣ್ಣು ನಾಯ್ಕ, ರೋಹನ್ ಡೋಂಗ್ರ ಇತರರಿದ್ದರು. 
ಜಿಲ್ಲೆ

ಕಬಕ ಪುತ್ತೂರು ನಿಲ್ದಾಣ ಸಮಗ್ರ ಅಭಿವೃದ್ಧಿ KABAKAPUTTUR

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಸಂಸದ ಬ್ರಿಜೇಶ್ ಚೌಟ ಹೇಳಿಕೆ
  • ಫ್ಲಾಟ್ ಫಾರ್ಮ್೧ರಲ್ಲಿ ಮೇಲ್ಛಾವಣಿಗೆ ಶಿಲಾನ್ಯಾಸ
ಪುತ್ತೂರು: ಮಂಗಳೂರಿನಿಂದ ಬೆಂಗಳೂರುವರೆಗೆ ರೈಲು ಹಳಿ ವಿದ್ಯುದೀಕರಣ ಮಾಡಲಾಗಿದ್ದು, ಮೂಲ ಸೌಕರ್ಯಗಳು ಹೆಚ್ಚಾದಾಗ ರೈಲುಗಳ ಸಂಚಾರ ಹೆಚ್ಚುತ್ತದೆ. ಪುತ್ತೂರಿನ ಜನರ ಬಹು ವರ್ಷದ ಬೇಡಿಕೆಯಾದ ಫ್ಲಾಟ್ ಫಾರ್ಮ್ ಮೇಲ್ಛಾವಣಿ ೪೩೦ ಮೀ. ಉದ್ದಕ್ಕೆ ಹಾಗೂ ಎಪಿಎಂಸಿ ಭಾಗದಿಂದ ಬರುವ ರಸ್ತೆಯನ್ನು ೪.೪ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಮೆಮೊ ರೈಲಿಗೆ ಬೇಡಿಕೆಯಿದ್ದು ಪ್ರಯತ್ನಿಸಲಾಗುತ್ತಿದೆ. ರಾಜ್ಯ ಮುತುವರ್ಜಿ ವಹಿಸಿದಾಗ ಕೇಂದ್ರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದು ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ಮೈಸೂರು ವಿಭಾಗದ ವತಿಯಿಂದ ಫ್ಲಾಟ್ ಫಾರ್ಮ್ ೧ರಲ್ಲಿ ಶೆಲ್ಟರ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಮೆಕ್ವೆ ಗೇಟ್, ಪುತ್ತೂರು ಕ್ಲಬ್, ಪುತ್ತೂರು ಗೇಟ್ ಭಾಗದಲ್ಲಿ ೧೮ ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗಲಿದೆ. ವಂದೇ ಭಾರತ್ ರೈಲಿಗೆ ಬೇಕಾದ ಕೋಚ್ ವಾಚರ್ ಸಿಸ್ಟಮ್ ಅನ್ನು ೫ ಕೋಟಿ ರೂ. ವೆಚ್ಚದಲ್ಲಿ ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ಮಾಡಲಾಗಿದೆ. ಕಬಕ ಪುತ್ತೂರಿನ ಎರಡನೇ ಫ್ಲಾಟ್ ಫಾರ್ಮ್ ಸೇರಿದಂತೆ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಪ್ಲ್ಯಾನ್ ಮಾಡಲಾಗುವುದು. ಸಿಆರ್‌ಎಫ್‌ನಲ್ಲಿ ೫೭ ಕೋಟಿ ರೂ. ಅನುದಾನಬಂದಿದ್ದು, ಪಿಡಬ್ಲ್ಯುಡಿ, ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಸೀನಿಯರ್ ಡಿವಿಜನಲ್ ಇಂಜಿನಿಯರ್ ರೋಹನ್ ಡೋಂಗ್ರ ಉಪಸ್ಥಿತರಿದ್ದರು. ಅಸಿಸ್ಟೆಂಟ್ ಇಂಜಿನಿಯರ್ ಹರ್ಷ ಕಾರ್ಯಕ್ರಮ ನಿರೂಪಿಸಿದರು.