ಪೊಲೀಸರು ಹೆಚ್ಚಿನ ಭದ್ರತೆಯನ್ನು ಕಲ್ಪಿಸಿದ್ದಾರೆ.
ಪುತ್ತೂರು: ಕಬಕ ವಿದ್ಯಾಪುರದಲ್ಲಿ ರಸ್ತೆಯ ಹೊಂಡಕ್ಕೆ ಹಾಕಿದ್ದ ಕಲ್ಲು, ಮಣ್ಣು ಮಳೆಗೆ ಕೊಚ್ಚಿ ಹೋಗಿರುವ ವಿಚಾರದಲ್ಲಿ ಅಕ್ಕಪಕ್ಕದ ಮನೆಯವರ ನಡುವೆ ಮಾತುಕತೆ ನಡೆದು, ಹಲ್ಲೆಗೆ ತಿರುಗಿ ಪುತ್ತೂರು ನಗರ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಮನೆಯ ಸಮೀಪ ವಾಸವಿರುವ ರಾಣಿ ಮತ್ತು ಮಕ್ಕಳಾದ ಶಿವಕುಮಾರ್, ಯಶೋದ ಅವರ ಜತೆಗೆ ರಸ್ತೆಯ ವಿಚಾರದಲ್ಲಿ ತಕರಾರು ಇದ್ದು, ಈ ವಿಚಾರವಾಗಿ ಭಾನುವಾರ ಬೆಳಗ್ಗೆ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ಆಶಿಕ್‌ನನ್ನು ಶಿವಕುಮಾರ್ ಕೈಯಿಂದ ದೂಡಿ ನೆಲಕ್ಕೆ ಬೀಳಿಸಿದ್ದು, ತಡೆಯಲು ಅಣ್ಣಂದಿರಾದ ಇಲ್ಯಾಸ್ ಬಿ, ರಿಯಾಜ್ ಕೆ ಹಾಗೂ ತಾಯಿ ಹಾಜಿರ ಮುಂದಾದ ಸಮಯ ಕೊಲ್ಲದೆ ಬಿಡುವುದಿಲ್ಲ ಎಂದು ಟೈಲ್ಸ್ ತುಂಡಿನಿಂದ ಇಲ್ಯಾಸ್ ತಲೆ ಹಿಂಭಾಗಕ್ಕೆ ಹೊಡೆದಿದ್ದಾನೆ. ರಾಡ್‌ನಿಂದ ರಿಯಾಜ್‌ನ ಹಣೆಗೆ, ಬಲ ಕಿವಿಯ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ. ಮಹಿಳೆಯ ಸೀರೆಯನ್ನು ಎಳೆದು ಅವಮಾನಗೊಳಿಸಿದ್ದಾರೆ. ಆಶಿಕ್,ಇಲ್ಯಾಸ್, ರಿಯಾಜ್, ಹಾಜಿರ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಶಿಕ್(೩೫) ನೀಡಿದ ದೂರಿನ ಪ್ರಕಾರ ಶಿವಕುಮಾರ್ (೩೦), ಯಶೋದ, ರಾಣಿ ವಿರುದ್ಧ ಪ್ರಕರಣ ದಾಖಲಾಗಿದೆ.
ನೀವು ಎಲ್ಲಿಂದಲೋ ಬಂದ ತಮಿಳಿನ ಕೀಳು ಜಾತಿಗೆ ಸೇರಿದ ಭೋವಿ ಜಾತಿಯವರು ಎಂದು ಹೇಳಿ ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ರಿಯಾಜ್ ಎಂಬಾತ ತಾಯಿ ರಾಣಿ, ಶಿವಕುಮಾರ್‌ಗೆ ಆಶಿಕ್, ಇಲ್ಯಾಸ್, ಹಾಜಿರ ಹಲ್ಲೆ ನಡೆಸಿ ಕೊಲ್ಲದೆ ಬಿಡುವುದಿಲ್ಲ, ಮನೆಯನ್ನು ಜೆಸಿಬಿ ತಂದು ಧ್ವಂಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಶಿವಕುಮಾರ್ ನೀಡಿದ ಪ್ರತಿ ದೂರಿನ ಪ್ರಕಾರ ರಿಯಾಜ್, ಆಶಿಕ್, ಇಲ್ಯಾಸ್, ಹಾಜಿರಾ ಮೇಲೆ ಪ್ರಕರಣ ದಾಖಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹೆಚ್ಚಿನ ಭದ್ರತೆಯನ್ನು ಕಲ್ಪಿಸಿದ್ದಾರೆ. ಗಾಯಾಳುಗಳನ್ನು ವಿವಿಧ ನಾಯಕರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.