ಜಿಲ್ಲೆ

ಇಲಾಖಾ ಅನುಮತಿ ಪಡೆಯದೆ ಜೂಜಾಡುತ್ತಿದ್ದ ನಾಲ್ವರು ಪೊಲೀಸ್ ವಶಕ್ಕೆ..!

Mangaluru - Nishantha Narayana

ಪುತ್ತೂರು: ಕಬಕ ಗ್ರಾಮದ ಶೇವಿರೆಯ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಇಲಾಖಾ ಅನುಮತಿಯನ್ನು ಪಡೆಯದೇ ಜೂಜಾಡುತ್ತಿದ್ದ ನಾಲ್ಕು ಮಂದಿಯನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಡ್ನೂರು ಗ್ರಾಮದ ಸನತ್ ಪೂಜಾರಿ (23), ಭರತ್ ಪೂಜಾರಿ (22), ಕಬಕ ಗ್ರಾಮದ ರವಿ (38), ಬನ್ನೂರು ಗ್ರಾಮ ಅಭಿಜಿತ್ (26) ಅವರನ್ನು ವಶಕ್ಕೆ ಪಡೆಯಲಾಗಿದೆ.

ಆ. 23 ರಂದು ಸಾಯಂಕಾಲ ಸಮಯ ಪುತ್ತೂರು ತಾಲೂಕು ಶೇವಿರೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಲಾಖಾ ಅನುಮತಿಯನ್ನು ಪಡೆಯದೇ ಹಣವನ್ನು ಪಣವಾಗಿ ಇಟ್ಟು ಕೋಳಿ ಅಂಕ ಜೂಜಾಟ ನಡೆಯುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ನಗರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಕೆಲವು ವ್ಯಕ್ತಿಗಳು ಪರಾರಿಯಾಗಿದ್ದು, ನಾಲ್ಕು ಮಂದಿ ಸಿಲುಕಿಕೊಂಡಿದ್ದಾರೆ. ಸ್ಥಳದಿಂದ ಎರಡು ಕೋಳಿಗಳನ್ನು , ಒಂದು ಕೋಳಿ ಬಾಳನ್ನು ಹಾಗೂ 600ರೂ. ನಗದು ವಶಕ್ಕೆ ಪಡೆದುಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.