ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 40ನೇ ವಾರ್ಷಿಕ ಕಬಡ್ಡಿ ಪಂದ್ಯಾಟದ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ನ.16 ಮತ್ತು 17ರಂದು ನಡೆಯಲಿರುವ ಅಂತಾರಾಜ್ಯಮಟ್ಟದ ಕಬಡ್ಡಿ ಉತ್ಸವದ ಲೋಗೋ ಬಿಡುಗಡೆ ಕಾರ್ಯಕ್ರಮ ಭಾನುವಾರ ನಡೆಯಿತು.
ಇರ್ವತ್ತೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಕಬಡ್ಡಿ ಆಟಗಾರ ಆಕಾಶ್ ಮಂಗಳೂರು ಲೋಗೋ ಬಿಡುಗಡೆಗೊಳಿಸಿದರು.
ಕಬಡ್ಡಿ ತೀರ್ಪುಗಾರರ ಸಂಘದ ಸಂಚಾಲಕ ಫ್ರಾನ್ಸಿಸ್ ವಿ.ವಿ, ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ತಾಲೂಕು ಕಾರ್ಯದರ್ಶಿ ಚಂದ್ರಶೇಖರ ಕರ್ಣ, ಪ್ರಮುಖರಾದ ವಿಜಯ ರೈ, ಡಾ.ರಾಮಕೃಷ್ಣ ಎಸ್, ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಶಿವಪ್ಪಗೌಡ ನಿನ್ನಿಕಲ್ಲು, ಬಬಿತಾ ದಿನೇಶ್, ಬೇಬಿರೇಖಾ ಶೆಟ್ಟಿ, ದೇವದಾಸ ಅಬುರ, ಎಡ್ವರ್ಡ್ ಡಿಸೋಜ, ಶಾಜಿ ಹುಸೇನ್, ಶೇಖರ ಪೂಜಾರಿ ಅಗಲ್ದೋಡಿ, ಗಿರೀಶ್ ಸಾಲ್ಯಾನ್ ಹೆಗ್ಡೆಬೆಟ್ಟುಗುತ್ತು, ಸಂತೋಷ್ ಕುಮಾರ್, ಪ್ರಕಾಶ್ ಅನಿಲಡೆ, ಪ್ರವೀಣ್ ಶೆಟ್ಟಿ ಕುರ್ಡುಮೆ, ಉಮೇಶ್ ಅಲೆಕ್ಕಿ, ಹೇಮಂತ ಕುಮಾರ್ ಮೂರ್ಜೆ, ಕ್ಲಬ್ ಗೌರವಾಧ್ಯಕ್ಷ ಅಬ್ದುಲ್ಲಾ ಪಿ, ಕಬಡ್ಡಿ ಸಂಚಾಲಕ ರಾಜೇಶ್ ಪಿ.ಬಂಗೇರ, ಸಹ ಸಂಚಾಲಕ ಅಬ್ದುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಕಾರ್ಯಕ್ರಮ ನಿರೂಪಿಸಿದರು.