ಜಿಲ್ಲೆ

ಕಬಡ್ಡಿಯಲ್ಲಿ ಸಾಧನೆ

Dharwada - Basavaraj Idli

ಹುಬ್ಬಳ್ಳಿ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಪಂಡಿತ ನೆಹರೂ ಪ್ರೌಢಾಶಾಲೆ ಸಂಯುಕ್ತಾಶ್ರಮದಲ್ಲಿ ಏರ್ಪಡಿಸಿದ್ದ ಹುಬ್ಬಳ್ಳಿಯ ಶಿರಗುಪ್ಪಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕೋಳಿವಾಡದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಎಸ್ ಡಿಎಂಸಿ ಅಧ್ಯಕ್ಷ ಬಸವರಾಜ ಅಣ್ಣಿಗೇರಿ, ಗ್ರಾಪಂ ಅಧ್ಯಕ್ಷ ಬಸವರಾಜ ಜಂತ್ಲಿ, ದೈಹಿಕ ಶಿಕ್ಷಣ ಶಿಕ್ಷಕ ಮುತ್ತಪ್ಪ ಕೂಲಗೂಡಿ, ಮುಖ್ಯೋಪಾಧ್ಯಾಯ ಅಶೋಕ ಒಡೆಯರ ಇತರರು ಅಭಿನಂದಿಸಿದ್ದಾರೆ.