ಜಿಲ್ಲೆ

ಕಾವಿ ಕಲೆ ಕರಾವಳಿಯ ಪರಂಪರೆ -ಕಲಾವಿದ ಡಾ. ಜನಾರ್ದನ ರಾವ್ ಹಾವಂಜೆ

Mangaluru - Hariprasad Rai


ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಘಟಕದ ವತಿಯಿಂದ ವಿಶ್ವ ಪರಂಪರೆಯ ಸಪ್ತಾಹದ ಆಚರಣೆಯ ಅಂಗವಾಗಿ ಕಾವಿ ಕಲೆಯ ಪರಂಪರೆ ಬಗ್ಗೆ ಖ್ಯಾತ ಕಲಾವಿದ ಡಾ. ಜನಾರ್ದನ ರಾವ್ ಹಾವಂಜೆ ಇವರಿಂದ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಉಪನ್ಯಾಸ ಕಾರ್ಯಕ್ರಮ ಜರಗಿತು.
ಕಾವಿ ಕಲೆ ನಿಯಮಿತ ರೂಪರೇಷೆಗಳಿಲ್ಲದ ವಿಧಾನ ಆಧಾರಿತ ಕಲೆ. ಆಧುನಿಕ ಅಭಿವೃದ್ಧಿ ಚಟುವಟಿಕೆಗಳಿಗೆ ಅನೇಕ ಕಾವಿ ಕಲಾಕೃತಿಗಳು ಕಳೆದುಹೋಗಿವೆ. ಇಂದು ಕಾವಿ ಕಲೆಗಾಗಿ ಭೌಗೋಳಿಕ ಸೂಚಕ ಟ್ಯಾಗ್‌ಗಾಗಿ ಹೋರಾಟ ನಡೆಯುತ್ತಿದೆ. ಆದರೆ ಕಾವಿ ಕಲೆ ಸಂಪೂರ್ಣ ಕರಾವಳಿಯ ಪರಂಪರೆಯಾಗಿದ್ದು, ಅದರ ಮಹತ್ವವನ್ನು ಸಂರಕ್ಷಿಸಲು ಸಾಮೂಹಿಕ ಪ್ರಯತ್ನ ಅಗತ್ಯ ಎಂದರು.
ಇಂಟಾಕ್ ಮಂಗಳೂರು ವಿಭಾಗದ ಸಂಚಾಲಕ ಸುಭಾಸ್ ಚಂದ್ರ ಬಸು ಸ್ವಾಗತಿಸಿ,ಸದಸ್ಯೆ ಕ್ಯಾರೋಲಿನ್ ಡಿಸೋಜಾ ವಂದಿಸಿದರು.