ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಅಧಿಕೃತ ಹಾಗೂ ಅನಧಿಕೃತ ನಿವೇಶನ, ಮನೆಗಳಿಗೆ ಖಾತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಆರಂಭಿಸಿರುವ ಬಿ ಖಾತಾ ಅಭಿಯಾನಕ್ಕೆ ಗ್ರಾಮಾಂತರ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ರಾಜ್ಯದ ಟ್ಾ 5 ಜಿಲ್ಲೆಗಳ ಪಟ್ಟಿಗೆ ಸೇರಿಸಲು ಅಧಿಕಾರಿಗಳಿ ಕಸರತ್ತು ನಡೆಸಿದ್ದಾರೆ.
ಗ್ರಾಮಾಂತರ ಜಿಲ್ಲೆಯಲ್ಲಿ ಪರಭಾರೆ ಉದ್ದೇಶಿದ ಮಾಲೀಕರು ಬಿ ಖಾತಾಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದು ಭಾಗಶಃ ಬಿ ಖಾತಾ ವಿತರಣೆಯಲ್ಲಿ ಇಲಾಖೆ ಯಶ ಕಂಡಿದೆ. ಆದರೆ ವಾಸ್ತವ್ಯ ಹೂಡಿರುವ ಕಟ್ಟಡ ಮಾಲೀಕರು ಈ ಬಗ್ಗೆ ನಿರಾಸಕ್ತಿ ತೋರಿಸುತ್ತಿರುವುದರಿಂದ ಯೋಜನೆ ಮಂದಗತಿಯಲ್ಲಿ ಸಾಗುವಂತಾಗಿದೆ. ಇದರಿಂದ ಕಳೆದ ಎರಡು ತಿಂಗಳ ಹಿಂದೆ 66084 ಖಾತಾ ವಿತರಿಸುವ ಮೂಲಕ ರಾಜ್ಯದ ಇತರೆ ಜಿಲ್ಲೆಗಳ ಪೈಕಿ ಗ್ರಾಮಾಂತರ ಜಿಲ್ಲೆ 8ನೇ ಸ್ಥಾನಕ್ಕೇರಿತ್ತು. ಆದರೆ ನಂತರದ ದಿನಗಳಲ್ಲಿ ಕಟ್ಟಡ ಮಾಲೀಕರ ನಿರಾಸಕ್ತಿಯಿಂದಾಗಿ ಪ್ರಸ್ತುತ 10 ನೇ ಸ್ಥಾನ ಕಾಯ್ದುಕೊಂಡಿದೆ. ಮುಂದಿನ ದಿನಗಳಲ್ಲಿ ಖಾತಾ ಅಭಿಯಾನದಲ್ಲಿ ರಾಜ್ಯದಲ್ಲಿ ಟ್ಾ 5 ರೊಳಗೆ ಸ್ಥಾನ ಕಾಯ್ದುಕೊಳ್ಳಲು ಅಧಿಕಾರಿ ವರ್ಗ ಕಾರ್ಯೋನ್ಮುಖವಾಗಿದ್ದು ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚೆಚ್ಚು ಪ್ರಚಾರಕ್ಕೆ ಮುಂದಾಗಿದೆ.
ಎಲ್ಲ ಆಸ್ತಿಗಳಿಗೆ ಇ-ಸ್ವತ್ತು: ಎಲ್ಲ ಆಸ್ತಿಗಳಿಗೆ ಇ-ಖಾತಾ ನೀಡುವ ಉದ್ದೇಶದಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ಅಭಿಯಾನ ಹಮ್ಮಿಕೊಂಡಿದ್ದು ಜಿಲ್ಲಾ ಕಂದಾಯ ಇಲಾಖೆ ಸಹಯೋಗದಲ್ಲಿ ನಗರ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಖಾತಾ ವಿತರಣೆ ನಡೆಯುತ್ತಿದೆ. ಮೇ 10ವರೆಗೆ ಇದ್ದ 3 ತಿಂಗಳ ಅಭಿಯಾನದ ಗಡುವು ಮುಂದಿನ (ಆ.10) 3 ತಿಂಗಳವರೆಗೂ ವಿಸ್ತರಣೆ ಮಾಡಿರುವುದರಿಂದ ಆಸ್ತಿ ಮಾಲೀಕರಿಗೆ ಈ ಅಭಿಯಾನ ವರದಾನವಾಗಿದೆ. ಇದರೊಂದಿಗೆ ಅನಧಿಕೃತ ನಿವೇಶನ ಹೊಂದಿದ್ದ ಮಾಲೀಕರಿಂದ 2024-25 ಸಾಲಿಗೆ ದುಪ್ಪಟ್ಟು ತೆರಿಗೆ ಪಾವತಿಸಿಕೊಂಡು ಬಿ-ಖಾತಾ ನೀಡಿ ನಗರ, ಪಟ್ಟಣ, ಸ್ಥಳೀಯ ಸಂಸ್ಥೆಗಳ ಖಜಾನೆಗೆ ಕೋಟ್ಯಂತರ ರೂ.ತೆರಿಗೆ ರೂಪದಲ್ಲಿ ಸಂಗ್ರಹವಾಗಿದ್ದು, ಅಭಿವೃದ್ಧಿ ಕೆಲಸಗಳಿಗೆ ಸಹಕಾರಿಯಾಗಲಿದೆ.
ಅಭಿಯಾನದ ಕಾರ್ಯವಿಧಾನ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ನೀಡಲು ಬಾಕಿ ಇರುವ ಆಸ್ತಿಗಳನ್ನು ಗುರುತಿಸುವುದು, ಇ-ಖಾತಾ ಪಡೆಯಲು ಗುರುತಿಸಲಾದ ಆಸ್ತಿಗಳ ಮಾಲೀಕರು ಇ-ಖಾತಾ ಪಡೆಯಲು ಬೇಕಾದ ದಾಖಲೆಗಳನ್ನು ಸಲ್ಲಿಸಲು ಮಾಹಿತಿ ನೀಡುವುದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾತಾ ಪಡೆಯಲು ಮಾಹಿತಿ ನೀಡುವ ಸಲುವಾಗಿ ಸಹಾಯವಾಣಿ ಸ್ಥಾಪಿಸುವುದು, ಮಾಹಿತಿ ನೀಡಲು ಸಿಬ್ಬಂದಿ ನೇಮಕ, ವಾಹನಗಳಲ್ಲಿ ಮುದ್ರಿತ ಧ್ವನಿ ಮೂಲಕ ಪ್ರಚಾರ ನಡೆಸಬೇಕಾಗಿ ಆದೇಶ ಹೊರಡಿಸಲಾಗಿದೆ.
ತಾಂತ್ರಿಕ ದೋಷ ನಿವಾರಣೆ: ಅಭಿಯಾನದ ಆರಂಭವಾದ ಹೊಸದರಲ್ಲಿ ಖಾತಾ ಪಡೆಯಲು ಬಹುತೇಕ ಕಡೆ ಸರ್ವರ್ ಸಮಸ್ಯೆ ಎದುರಾಗಿತ್ತು. ತಾಂತ್ರಿಕ ಕಾರಣ ನೀಡಿ ತಿಂಗಳುಗಟ್ಟಲೆ ಅಲೆದಾಡಿಸುತ್ತಿರುವ ಪ್ರಸಂಗಗಳೂ ಕಂಡುಬಂದಿದ್ದವು. ಆದರೆ ಪ್ರಸ್ತುತ ತಾಂತ್ರಿಕ ಸಮಸ್ಯೆಗಳು ಪರಿಹಾರವಾಗಿದ್ದು ಖಾತಾ ವಿತರಣೆ ಕಾರ್ಯ ಚುರುಕುಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
---
ಇ-ಆಸ್ತಿ ತಂತ್ರಾಂಶದಲ್ಲಿನ ಪ್ರಗತಿ
ಸ್ಥಳೀಯ ಸಂಸ್ಥೆ ಅಧಿಕೃತ ಅನಧಿಕೃತ ಒಟ್ಟು
ವಿಜಯಪುರ 3877 1682 5559
ಬಾಶೆಟ್ಟಿಹಳ್ಳಿ 3897 1672 5569
ದೇವನಹಳ್ಳಿ 9961 393 10354
ಹೊಸಕೋಟೆ 10321 1525 11846
ದೊಡ್ಡಬಳ್ಳಾಪುರ 10364 4139 14512
ನೆಲಮಂಗಲ 12168 6076 18244
ಜಿಲ್ಲೆಯ ನಾಲ್ಕೂ ತಾಲೂಕುಗಳ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಖಾತಾ ವಿತರಣೆ ಪ್ರಕ್ರಿಯೆ ನಡೆಯುತ್ತಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಮೊದಲ ಅಥವಾ ಟ್ಾ 5 ರೊಳಗಿನ ಸ್ಥಾನ ಪಡೆಯಲು ಇಲಾಖೆ ಸಾಕಷ್ಟು ಶ್ರಮವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಕ್ರಿಯೆ ಚುರುಕುಗೊಳಿಸುವ ಪ್ರಯತ್ನ ನಡೆಯುತ್ತಿದೆ,
ರಮೇಶ್, ನಗರಯೋಜನೆ ಪಿಡಿ ಬೆಂ.ಗ್ರಾಮಾಂತರ