ಜಿಲ್ಲೆ

ಪ್ರಜೆಗಳೇ ಪ್ರಭುಗಳು ಎಂಬುದು ಪ್ರಜಾಪ್ರಭುತ್ವದ ನಿಜವಾದ ಆಶಯ :ಮಾಜಿ ಶಾಸಕ ಡಿ. ಆರ್. ಪಾಟೀಲ

Gadag - Shivanand Hiremath

ಗದಗ: ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಸಾರ್ವಭೌಮ, ಪ್ರಜಾಪ್ರತಿನಿಧಿಗಳು ಸೇವಕರು, ಪ್ರಜಾಪ್ರಭುತ್ವ, ಸಂವಿಧಾನವನ್ನುಸಾರಿದ ಡಾ.ಬಿ.ಆರ್. ಅಂಬೇಡ್ಕರರ ಆಶಯ ಕೂಡ ಪ್ರಜಾ ಕಲ್ಯಾಣ ಸಾಧಿಸುವುದಾಗಿತ್ತು. ನಾಗರಿಕರು ಪ್ರತಿ ತಿಂಗಳು ವಾರ್ಡ್ ಸಭೆ ಕರೆದು ತಮ್ಮ ವಾರ್ಡಿನ ಕುಂದು ಕೊರತೆಗಳ ಬಗ್ಗೆ ಚಿಂತನೆ ನಡೆಸಿ ತಾವೇ ಕಾರ್ಯಕ್ರಮ ಗಳನ್ನು ಯೋಜಿಸಿ ಕಾರ್ಯಪ್ರವೃತ್ತರಾಗುವಂತೆ ಜನಪ್ರತಿನಿಧಿಗಳಿಗೆ, ನಗರಸಭೆ ಸದಸ್ಯರಿಗೆ ಆದೇಶಿಸಬೇಕೆಂದು ವಿವೇಕಾನಂದ ನಗರದ ಶ್ರೀ ಕಾಶೀ ವಿಶ್ವನಾಥ ದೇವಸ್ಥಾನದಲ್ಲಿ ಜರುಗಿದ ಜೀವನ ದರ್ಶನ ೩೦ನೇ ಮಾಸಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಶಾಸಕರಾದ ಡಿ ಆರ್ ಪಾಟೀಲ ಹೇಳಿದರು.

ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಪ್ರೋ.ಎಂ.ಎನ್. ಕಾಮನಹಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿವೇಕಾನಂದ ನಗರದಲ್ಲಿ ಪ್ರಜ್ಞಾವಂತ ನಾಗರಿಕರಿದ್ದು ಸಾಮುದಾಯಿಕವಾಗಿ ನಗರದ ಸ್ವಚ್ಛತೆಗೆ, ನಗರದ ಅಭಿವೃದ್ಧಿಗೆ ಶ್ರಮಿಸುತ್ತಾರೆ. ನಗರದಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಂತರ 11ನೇ ವಾರ್ಡಿನ ನಗರಸಭೆ ಸದಸ್ಯರಾದ ಶ್ರೀಮತಿ ಶ್ವೇತಾ ದಂಡಿನ ವಾರ್ಡಿಗೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ರಾಷ್ಟ್ರಮಟ್ಟದ ಜನಪದ ಕಲಾವಿದರಾದ ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರು ಉಪನ್ಯಾಸವನ್ನು ನೀಡಿ ಜಾನಪದ ಸಂಸ್ಕೃತಿಯನ್ನು ಇಂದಿನ ಯುವ ಪೀಳಿಗೆ ಮುಂದುವರಿಸುವ ಅವಶ್ಯಕತೆ ಇದೆ. ಜಾನಪದ ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರದಾಗಿದೆ ಎಂದರು.

ನಂತರ ಪ್ರಸಾದ ಭಕ್ತಿ ಸೇವೆ ಹಮ್ಮಿಕೊಂಡಿದ್ದ ವಾಯ್. ಆರ್. ಬೆಲೇರಿ, ಮುತ್ತಪ್ಪ ಹಾಲಣ್ಣವರ, ಶ್ರೀಮತಿ ಎಲ್. ಬೈಂದೂರ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮವನ್ನು ನಾಡಗೀತೆಯ ಮೂಲಕ ಪ್ರಾರಂಭಿಸಲಾಯಿತು.

ಕೋಶಾಧ್ಯಕ್ಷರಾದ ಎಂ.ಬಿ. ಚೆನ್ನಪ್ಪಗೌಡರ ಸ್ವಾಗತ ಹಾಗೂ ಪರಿಚಯ ಭಾಷಣ ಮಾಡಿದರು.ಕಾರ್ಯಕ್ರಮದ ನಿರೂಪಣೆಯನ್ನು ಸಮಿತಿಯ ಸಮಿತಿಯ ಕಾರ್ಯದರ್ಶಿಗಳಾದ ಕೆ.ಆಯ್. ಕುರುಗೋಡ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಜಿ.ಜಿ. ಕುಲಕರ್ಣಿ, ಉಪಾಧ್ಯಕ್ಷರಾದ ಬಸವರಾಜ ಸುಂಕದ,ಸಹ ಕಾರ್ಯದರ್ಶಿ ಎಂ. ಕೆ. ಲಕ್ಕುಂಡಿ, ಕೋಶಾಧ್ಯಕ್ಷರಾದ ಎಂ.ಬಿ. ಚೆನ್ನಪ್ಪಗೌಡರ್, ಸಹಕೋಶಾಧ್ಯಕ್ಷರಾದ ಆರ್.ಬಿ.ಒಡೆಯರ, ನಿರ್ದೇಶಕರಾದ ವಿ. ಆರ್. ಕುಲಕರ್ಣಿ, ಅಮರೇಶ್ ಹಾದಿ, ಕಾರ್ತಿಕ್ ಮಡಿವಾಳರ್ ಮಹಾದೇವಿ ಗೋಗೇರಿ, ರಾಧಿಕಾ ಬಂದಂ, ಬಸವರಾಜ ಹಿರೇಮಠ,ಪ್ರಭಯಸ್ವಾಮಿ ಹಿರೇಮಠ ಹಾಗೂ ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು.