ಜಿಲ್ಲೆ

ಕ್ಯಾಲನೂರು ಚಂದ್ರಶೇಖರಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿ

ಕ್ಯಾಲನೂರು: ಕೋಲಾರ ತಾಲೂಕು ಕ್ಯಾಲನೂರು ಗ್ರಾಮದ ಚಂದ್ರಶೇಖರಸ್ವಾಮಿ ಬ್ರಹ್ಮರಥೋತ್ಸವವು ಶನಿವಾರ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ರಥೋತ್ಸವಕ್ಕೆ ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ಕುಮಾರ್​ ಮತ್ತು ಮಾಜಿ ಸಚಿವ ವರ್ತೂರು ಪ್ರಕಾಶ್​ ಚಾಲನೆ ನೀಡಿದರು. ಭಕ್ತಾದಿಗಳು ರಥದ ಮೇಲೆ ಬಾಳೆಹಣ್ಣು, ಹೂವು, ದವನ ಎಸೆದು ಹರಕೆ ತೀರಿಸಿದರು.

ರಥೋತ್ಸವ ಅಂಗವಾಗಿ ಬೆಳಗ್ಗೆ ಕಳಸ ಸ್ಥಾಪನೆಯೊಂದಿಗೆ ವಿವಿಧ ಪೂಜಾ ಕಾರ್ಯಗಳು ನಡೆದವು, ಭಕ್ತಾದಿಗಳಿಗೆ ದಾನಿಗಳು ಮಜ್ಜಿಗೆ, ಪಾನಕ, ಕೋಸಂಬರಿ ಹಂಚಿದರು.

ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಕೋಲಾರ, ಚಿಂತಾಮಣಿ ಮುಂತಾದ ಕಡೆಗಳಿಂದ ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು.

ಗ್ರಾಪಂ ಅಧ್ಯಕ್ಷ ಎನ್​.ರಮೇಶ್​, ಗ್ಯಾರಂಟಿ ಯೋಜನೆಗಳ ಸದಸ್ಯ ವಾಡಿಗಾನಹಳ್ಳಿ ನವೀನ್​, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್​ ವೆಂಕಟೇಶ್​, ಮಾಜಿ ಸದಸ್ಯ ಬಂಕ್​ ಮಂಜುನಾಥ್​, ಪಿಎಲ್​ಡಿ ಬ್ಯಾಂಕ್​ ಮಾಜಿ ಅಧ್ಯಕ್ಷ ಚಂಜಿ ಮಲೆ ರಮೇಶ್​, ಮದ್ದೇರಿ ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸಗೌಡ, ಚನ್ನಸಂದ್ರ ಗ್ರಾಪಂ ಅಧ್ಯಕ್ಷೆ ದೀಪಾ ಎಸ್​.ರಾಮೇಗೌಡ, ಕ್ಯಾಲನೂರು ಕರ್ನಾಟಕ ಪಬ್ಲಿಕ್​ ಶಾಲೆ ಉಪಾಧ್ಯಕ್ಷ ಅನಿಲ್​ಕುಮಾರ್​, ಕ್ಯಾಲನೂರು ರೇಷ್ಮೆ ಬೆಳೆಗಾರರ ಸಹಕಾರ ಸಂಘದ ನಿರ್ದೇಶಕ ಪ್ರಕಾಶ್​, ಹರಟಿ ಅಗ್ರಹಾರ ಚೌಡರೆಡ್ಡಿ, ದಲಿತ ಮುಖಂಡ ಆಂಜನಪ್ಪ, ಕ್ಯಾಲನೂರು ಗ್ರಾ.ಪಂ ಉಪಾಧ್ಯಕ್ಷೆ ರತ್ನಮ್ಮ ನಾರಾಯಣಸ್ವಾಮಿ, ಸಮಾಜಿ ಸೇವಕ ಟಾಕೀಸ್​ ಸುರೇಶ್​ ಇದ್ದರು.