ಜಿಲ್ಲೆ

ಪುರಸಭಾ ಅಧ್ಯಕ್ಷ ಸ್ಥಾನಕ್ಕೆ ಕೆ.ಶ್ರೀಧರ್ ರಾಜೀನಾಮೆ

ಹೊಳೆನರಸೀಪುರ: ಪುರಸಭಾ ಅಧ್ಯಕ್ಷ ಕೆ.ಶ್ರೀಧರ್ ಈ ಹಿಂದಿನ ಒಪ್ಪಂದದಂತೆ ಶಾಸಕ ರೇವಣ್ಣ ಅವರ ಸೂಚನೆ ಮೇರೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಪುರಸಭೆ ಸಭಾಂಗಣಕ್ಕೆ ಆಗಮಿಸಿದ ಶಾಸಕ ರೇವಣ್ಣ ಮಾಧ್ಯಮ ಪ್ರತಿನಿಧಿಗಳನ್ನು ಕರೆದು ಸ್ಪಷ್ಟಪಡಿಸಿದರು. ಮುಂದಿನ ಅಧ್ಯಕ್ಷರು ಯಾರು ಎನ್ನುವ ಪ್ರಶ್ನೆಗೆ ಮುಂದೆ ನೋಡೋಣ ಎಲ್ಲ ಜನಾಂಗದವರಿಗೂ ಅವಕಾಶ ನೀಡಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.

ಏಪ್ರಿಲ್ 13 ರಂದು ನಡೆಯುವ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ನಂತರ ರಾಜಿನಾಮೆ ಪಡೆಯಬಹುದಿತ್ತು. ನಾಲ್ಕೈದು ತಿಂಗಳಿಗೊಮ್ಮೆ ಅಧ್ಯಕ್ಷರನ್ನು ಬದಲಾಯಿಸಿದರೆ ಪಟ್ಟಣದ ಅಭಿವೃದ್ಧಿ ಕೆಲಸ ಮಾಡುವುದಾದರೂ ಹೇಗೆ ಎಂದು ಆರ್ಯವೈಶ್ಯ ಜನಾಂಗದ ಕೆಲ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧ್ಯಕ್ಷ ಗಾದಿಗೆ ಒಕ್ಕಲಿಗ ಜನಾಂಗದ ಎಚ್.ಕೆ. ಪ್ರಸನ್ನಕುಮಾರ್, ದೇವಾಂಗ ಜನಾಂಗದ ಎ. ಜಗನ್ನಾಥ್ ಹಾಗೂ ಪರಿಶಿಷ್ಟ ಸಮಾಜದ ನಿಂಗಯ್ಯ, ಉಮೇಶ್ ಆಸಕ್ತರಾಗಿದ್ದಾರೆ.