ಕೆ.ಆರ್.ಪೇಟೆ: ತಾಲ್ಲೂಕಿನ ಮಂದಗೆರೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕೆ.ಎಸ್.ನಂದಿನಿಮಂಜೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರನ್ನು ಗ್ರಾ.ಪಂ.ಸದಸ್ಯರು ಮತ್ತು ಮುಖಂಡರು ಅಭಿನಂದಿಸಿದರು. 
ಜಿಲ್ಲೆ

ಮಂದಗೆರೆ ಗ್ರಾಪಂಗೆ ಕೆ.ಎಸ್.ನಂದಿನಿ ಅಧ್ಯಕ್ಷೆ

ಕೆ.ಆರ್.ಪೇಟೆ: ತಾಲೂಕಿನ ಮಂದಗೆರೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕೆ.ಎಸ್.ನಂದಿನಿ ಮಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಎಂ.ವರಲಕ್ಷ್ಮೀ ಅವರನ್ನು ಅವಿಶ್ವಾಸ ನಿರ್ಣಯದ ಮೂಲಕ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಂದಿನಿ ಮಂಜೇಗೌಡ ಅವರನ್ನು ಹೊರತುಪಡಿಸಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅರುಣ್‌ಕುಮಾರ್, ಸಹ ಚುನಾವಣಾಧಿಕಾರಿಯಾಗಿ ಪಿಡಿಓ ಸುವರ್ಣ, ತಾಪಂ ವ್ಯವಸ್ಥಾಪಕ ಅನಿಲ್‌ಬಾಬು ಕಾರ್ಯನಿರ್ವಹಣೆ ಮಾಡಿದರು.

ನೂತನ ಅಧ್ಯಕ್ಷೆ ನಂದಿನಿ ಮಂಜೇಗೌಡ ಅವರನ್ನು ಅಭಿನಂದಿಸಲಾಯಿತು. ಉಪಾಧ್ಯಕ್ಷೆ ಕಾಮಾಕ್ಷಮ್ಮ, ಗ್ರಾಪಂ ಸದಸ್ಯರಾದ ಎ.ಆರ್.ನಿಂಗರಾಜು, ಮಹಾದೇವಿ, ಜಿಎಂ.ವಿಜಯಕುಮಾರ್, ಕೃಷ್ಣಜೋಗಿ, ಎಂ.ಕೆ.ಮೋಹನ್, ಎಲ್.ಎಂ.ಮಹಾದೇವಿ, ಚಿಕ್ಕಮಂದಗೆರೆ ಮಂಜೇಗೌಡ, ಎಂ.ಕೆ.ಮೋಹನ್, ದೊಡ್ಡೇಗೌಡ ಇದ್ದರು.