ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆ ಕಾರಿಡಾರ್&-2 ರ ನಿಮಾರ್ಣಕ್ಕಾಗಿ ಅಲೈನ್ಮೆಂಟ್ಗೆ ಅವಶ್ಯಕತೆಯಿರುವ ಬೆಂಗಳೂರು ಉತ್ತರ ತಾಲೂಕು ಮ್ಯಾಕಲ ಚನ್ನೇನಹಳ್ಳಿ ಹಾಗೂ ಯಲಹಂಕ ತಾಲೂಕು, ಪೀಣ್ಯ ಪ್ಲಾಂಟೇಶನ್ ಗ್ರಾಮದ ಗಡಿ ಮಧ್ಯದಲ್ಲಿ 20 ಗುಂಟೆ ಜಮೀನಿನ ಸರಹದ್ದಿನಲ್ಲಿ ರೈಲ್ವೆ ರಸ್ತೆಗೆ ಸೇರಿದ ಸುಮಾರು 500 ಮೀಟರ್ ಖರಾಬು ಜಮೀನು ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇದರ ಮೌಲ್ಯವು ಅಂದಾಜು 40 ಕೋಟಿ ರೂಪಾಯಿ ಇದೆ. ಸದರಿ ಖರಾಬು ಜಮೀನಿಗೆ ಹೊಂದಿಕೊಂಡಿರುವ ಜಾಗವನ್ನು ಬಾಗಮನೆ ಡೆವಲಪರ್ಸ್ ಒತ್ತುವರಿ ಮಾಡಿದ್ದು, ಸ್ಥಳ ಪರಿಶೀಲನೆ ಸಮಯದಲ್ಲಿ ಸದರಿ ಜಾಗವು ರೈಲ್ವೆ ಸರಹದ್ದಿನ ರಸ್ತೆಗೆ ಸೇರಿದೆ ಎಂದು ಭೂದಾಖಲೆಗಳ ಸಹಾಯಕ ನಿರ್ದೇಶಕ ದೃಢೀಕರಿಸಿರುತ್ತಾರೆ.
ತೆರವುಗೊಳಿಸಿದ ಬಳಿಕ ಕೆ&-ರೈಡ್ ಮತ್ತು ರೈಲ್ವೆ ಇಲಾಖೆಯಿಂದ ಗಡಿ ಕಲ್ಲುಗಳನ್ನು ಅಳವಡಿಸಿ, ಜಮೀನನ್ನು ಕೆ-ರೈಡ್ ಸಂಸ್ಥೆಗೆ ಕಾಮಗಾರಿ ಕೈಗೊಳ್ಳಲು ಹಸ್ತಾಂತರಿಸಲಾಯಿತು.