ಜಿಲ್ಲೆ

ಕೆ ಎಚ್ ಪಾಟೀಲ್ ಕಾಲೇಜ್ ವಾರ್ಷಿಕೋತ್ಸವ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್. ಪಾಟೀಲ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ 17ನೇ ವಾರ್ಷಿಕೋತ್ಸವ ಸಂಭ್ರಮದಿಂದ ಜರುಗಿತು.

ಮುಖ್ಯ ಅತಿಥಿಗಳಾಗಿದ್ದ ಕಾರ್ಗಿಲ್ ಯೋಧ ಕ್ಯಾಪ್ಟನ್ ನವೀನ ನಾಗಪ್ಪ, ದೇಶ ಸೇವೆಗಿಂತ ಮಿಗಿಲಾದದ್ದು ಬೇರೆ ಯಾವುದೂ ಇಲ್ಲ ಎಂದು ಯುದ್ಧದ ಸಂದರ್ಭದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು.

ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ತಂದೆ- ತಾಯಿಯನ್ನು ಗೌರವಿಸಿ ಒಳ್ಳೆಯ ಸಂಸತಿಯನ್ನು ರೂಢಿಸಿಕೊಳ್ಳಿ, ಕಠಿಣ ಪರಿಶ್ರಮಿಗಳಾಗಿ ಎಂದು ಸಲಹೆ ನೀಡಿದರು.

ಕರ್ನಾಟಕ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಶ್ಯಾಮ ಮಲ್ಲನಗೌಡ್ರ ಮಾತನಾಡಿದರು.
ವೇಮನ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಆರ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್ ಅಶೋಕ ಇಟಗಿ, ಉಪಾಧ್ಯಕ್ಷ ವಿ.ಕೆ. ರಡ್ಡೇರ, ನಿರ್ದೇಶಕರಾದ ವೈ.ಕೆ. ಪಾಟೀಲ, ದೀಪಕ ಪಾಟೀಲ, ಮೋಹನ ಹೊಸಮನಿ, ಎಚ್.ಎಚ್. ಕಿರೇಸೂರ. ಪ್ರಾಚಾರ್ಯ ಎಸ್.ಬಿ. ಸಣಗೌಡ್ರ, ಉಪನ್ಯಾಸಕ ಶಂಕರ ಕುಂಬಾರ ಉಪಸ್ಥಿತರಿದ್ದರು.

ಉಪನ್ಯಾಸಕಿ ಶೈಲಾ ಇಟಗಿ ಕಾರ್ಯಕ್ರಮ ನಿರೂಪಿಸಿದರು. ಸಹ ಸಂಯೋಜಕ ಸಚಿನ ಮಾಚಾ ವಂದಿಸಿದರು.