ಜಿಲ್ಲೆ

ಶಾಸಕ ಕೆ.ಜಿ. ಬೋಪಯ್ಯ ವಿರುದ್ಧ ವಯಸ್ಸು ತಿದ್ದಿದ ಆರೋಪ

reportermys

ಮಡಿಕೇರಿ: ವಿರಾಜಪೇಟೆ ಶಾಸಕ ಕೆ. ಜಿ. ಬೋಪಯ್ಯ ತಮ್ಮ ವಯಸ್ಸನ್ನು ತಿದ್ದಿ ತಪ್ಪು ಮಾಹಿತಿ ನೀಡಿ ಚುನಾವಣೆ ಆಯೋಗಕ್ಕೆ ನಾಮಪತ್ರ ಸಲ್ಲಿಸಿದ್ದರೆಂದು ಚೇರಳ ಶ್ರೀಮಂಗಲ ಗ್ರಾಮದ ಪಿ.ಬಿ.ತಿಮ್ಮಯ್ಯ ಎಂಬವರು ಆರೋಪಿಸಿದ್ದಾರೆ. ಮಡಿಕೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಚುನಾವಣಾ ಆಯೋಗ, ಎಸ್.ಪಿ.ಗೂ ದೂರು ನೀಡಲಾಗಿದೆ. ಕಾನೂನು ಹೋರಾಟವನ್ನೂ ನಡೆಸಲಾಗುವುದು ಎಂದರು.


ಕೆ. ಜಿ. ಬೋಪಯ್ಯ ೨೬.೧೦.೧೯೭೯ರಲ್ಲಿ ಬಾರ್ ಕೌನ್ಸಿಲ್ ಅಲ್ಲಿ ವಕೀಲರಾಗಿದ್ದು ಅವರು ಆಗ ತಮ್ಮ ಹುಟ್ಟಿದ ದಿನಾಂಕವನ್ನು ೧೯೫೧ ಅಕ್ಟೋಬರ್ ೧೭ ಎಂದು ದಾಖಲಿಸಿದ್ದಾರೆ. ೨೦೦೪ ನೇ ಸಾಲಿನ ಚುನಾವಣೆ ಸಮಯದಲ್ಲಿ ಅವರ ವಯಸ್ಸು ಅವರ ಜನ್ಮ ದಿನಾಂಕದ ಅನುಗುಣವಾಗಿ ೫೩ ವರ್ಷ ಆಗಬೇಕು. ಆದರೆ ಬೋಪಯ್ಯನವರು ತಮ್ಮ ವಯಸ್ಸನ್ನು ೪೯ ವರ್ಷ ಎಂದು ಸುಳ್ಳು ಮಾಹಿತಿ ದಾಖಲಿಸಿದ್ದಾರೆ. ಅಲ್ಲದೆ ೨೦೧೩ ನೇ ಸಾಲಿನ ಚುನಾವಣೆಯಲ್ಲಿ ಅವರ ವಯಸ್ಸು ಜನ್ಮ ದಿನಾಂಕದ ಅನುಗುಣವಾಗಿ ೬೧ ವರ್ಷ ಆಗಬೇಕು. ಆದರೆ ಅವರು ಚುನಾವಣೆ ಆಯೋಗಕ್ಕೆ ಅವರ ವಯಸ್ಸನ್ನು ೫೮ ವರ್ಷ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ೨೦೧೮ನೇ ಚುನಾವಣೆಯಲ್ಲಿ ಅವರ ವಯಸ್ಸು ಅವರ ಜನ್ಮ ದಿನಾಂಕದ ಅನುಗುಣವಾಗಿ ೬೭ ಆಗಿದ್ದು ಚುನಾವಣೆ ಆಯೋಗಕ್ಕೆ ತಮ್ಮ ವಯಸ್ಸನ್ನು ೬೫ ಎಂದು ಸುಳ್ಳು ಮಾಹಿತಿ ನೀಡಿದ್ದಾರೆಂದು ತಿಮ್ಮಯ್ಯ ಆರೋಪಿಸಿದ್ದಾರೆ.


ಇದು ಚುನಾವಣೆ ನೀತಿ ಸಂಹಿತೆ ಅನುಗುಣವಾಗಿ ಗಂಭೀರ ಅಪರಾಧವಾಗಿದ್ದು, ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.