ಜಿಲ್ಲೆ

15 ರಂದು ಶಿಕ್ಷಣ ಶ್ರೀನಿಧಿ ಅಭಿನಂದನಾ ಗ್ರಂಥ ಲೋಕಾರ್ಪಣೆ

ತುಮಕೂರು: ವಿದ್ಯಾವಾಹಿನಿ ಸಂಸ್ಥೆಯ ಸಂಸ್ಥಾಪಕ ಕೆ.ಬಿ.ಜಯಣ್ಣ ಅವರ ಅಭಿನಂದನೆ ಹಾಗೂ ಶಿಕ್ಷಣ ಶ್ರೀನಿಧಿ ಅಭಿನಂದನಾ ಗ್ರಂಥ ಲೋಕಾರ್ಪಣೆ ಸಮಾರಂಭವನ್ನುಫೆ.15 ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 10.30ಕ್ಕೆ ಕುವೆಂಪುನಗರದ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸಿದ್ದಗಂಗಾಮಠಾಧ್ಯಕ್ಷ ಸಿದ್ದಲಿಂಗಶ್ರೀಗಳ ಸಾನ್ನಿಧ್ಯದಲ್ಲಿ ಸಮಾರಂಭವನ್ನು ಗೃಹಸಚಿವ ಡಾ.ಜಿ.ಪರಮೇಶ್ವರ ಉದ್ಘಾಟಿಸುವರು. ಶಿಕ್ಷಣ ಶ್ರೀನಿಧಿ ಗ್ರಂಥವನ್ನು ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಲೋಕಾರ್ಪಣೆ ಮಾಡುವರು.

ಸಚಿವ ಕೆ.ಎನ್​.ರಾಜಣ್ಣ, ಕೆಎಸ್​ಆರ್​ಟಿಸಿ ಅಧ್ಯಕ್ಷ ಎಸ್​.ಆರ್​.ಶ್ರೀನಿವಾಸ್​, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್​, ಬಿ.ಸುರೇಶಗೌಡ, ಚಿದಾನಂದ ಎಂ.ಗೌಡ, ಡಿ.ಟಿ.ಶ್ರೀನಿವಾಸ್​, ಆರ್​.ರಾಜೇಂದ್ರ, ಮಾಜಿ ಸಚಿವ ಸೊಗಡುಶಿವಣ್ಣ, ಮಾಜಿ ಸಂಸದ ಜಿ.ಎಸ್​.ಬಸವರಾಜು ಮಾಜಿ ಶಾಸಕರಾದ ಡಾ.ಎಂ.ಆರ್​.ಹುಲಿನಾಯ್ಕರ್​, ವೈ.ಎ.ನಾರಾಯಣಸ್ವಾಮಿ, ಎಚ್​.ಎಸ್​.ಶಿವಶಂಕರ್​, ಅಭಿನಂದನ ಗ್ರಂಥ ಸಮಿತಿ ಗೌರವ ಸಂಪಾದಕ ಎನ್​.ಬಿ.ಪ್ರದಿಪ್​ ಕುಮಾರ್​ ಉಪಸ್ಥಿತರಿರುವರು.