ಜಿಲ್ಲೆ

ಸಪ್ತಗಿರಿಗೌಡ ಪರ ಅಣ್ಣಾಮಲೈ ರೋಡ್ ಶೋ

ಬೆಂಗಳೂರು: ಗಾಂಧಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಪರವಾಗಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಬುಧವಾರ ವಿವಿಧೆಡೆ ಭರ್ಜರಿ ರೋಡ್ ಶೋ ನಡೆಸಿದರು.

ಕಾಟನ್​ಪೇಟೆಯ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ಸಪ್ತಗಿರಿಗೌಡ, ಮುನಿರತ್ನ, ಬಿಬಿಎಂಪಿ ಮಾಜಿ ಸದಸ್ಯ ಬಿ.ಟಿ.ಎಸ್. ನಾಗರಾಜ್ ಪುತ್ರ ಅಭಿನವ್ ನಾಗರಾಜ್ ಸೇರಿ ಪಕ್ಷದ ಪ್ರಮುಖರು ರೋಡ್ ಶೋ ನಡೆಸಿ ಪಕ್ಷದ ಪರ ಅಲೆ ಸೃಷ್ಟಿಸಿದರು.

ರಾತ್ರಿ 7.30ಕ್ಕೆ ರೋಡ್ ಶೋ ಆರಂಭಿಸುತ್ತಿದ್ದಂತೆ ಕಾರ್ಯಕರ್ತ ರಲ್ಲಿ ವಿದ್ಯುತ್​ಸಂಚಾರ ಉಂಟಾಯಿತು. ಅಣ್ಣಾಮಲೈ ಮಾತನಾಡಿ, ಕ್ಷೇತ್ರದ ಬಗ್ಗೆ ಸಪ್ತಗಿರಿಗೌಡ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದಾರೆ. ಮತದಾರರ ಉತ್ಸಾಹ ನೋಡಿದರೆ, ಈ ಬಾರಿ ಗಾಂಧಿನಗರದಲ್ಲಿ ಬದಲಾವಣೆಯಾಗಿ ಬಿಜೆಪಿಯ ಕಮಲ ಆರಳುವುದು ಬಹುತೇಕ ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಗಾಂಧಿನಗರ ಕ್ಷೇತ್ರದ ಶಾಸಕರು ಅಭಿವೃದ್ಧಿ ವಿಚಾರ ದಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯದ ಯೋಜನೆಗಳನ್ನು ಅನುಷ್ಠಾನ ಮಾಡದೆ, ಕ್ಷೇತ್ರ ವನ್ನು ನಿರ್ಲಕ್ಷಿಸಿದ್ದಾರೆ. ಇವರನ್ನು ಮೂಲೆಗೆ ತಳ್ಳಿ, ಅಭಿವೃದ್ಧಿ ಪರವಾಗಿ ಇರುವ ಬಿಜೆಪಿಯನ್ನು ಬೆಂಬಲಿಸಬೇಕು. | ಕೆ.ಅಣ್ಣಾಮಲೈ ಬಿಜೆಪಿ ಚುನಾವಣಾ ಸಹ ಉಸ್ತುವಾರಿ