ತೇರದಾಳ: ಸಮಾಜದಲ್ಲಿ ಜಾತಿ ಆಧಾರಿತವಾಗಿ ತುಳಿತಕ್ಕೊಳಪಟ್ಟ ನೊಂದವರ ಧ್ವನಿಯಾಗಿ, ಸಮಾನತೆಯ ತತ್ವದ ಮೂಲಕ ಹಿಂದುಳಿದ ವರ್ಗದ ಜನರಿಗೆ ಶಿಕ್ಷಣ ನೀಡಿ, ಗಟ್ಟಿತನದ ಬದುಕು ಕಟ್ಟಿಕೊಟ್ಟ ಮಹಾನ್ ವ್ಯಕ್ತಿ ಜ್ಯೋತಿಬಾ ಫುಲೆ ಅವರ ಜನ್ಮಸ್ಮರಣೆಯ ಕ್ಷಣವು ಅಮೂಲ್ಯವಾಗಿದೆ ಎಂದು ಸ್ಥಳೀಯ ಹಿರೇಮಠದ ಗಂಗಾಧರದೇವರು ಹೇಳಿದರು.
ಜ್ಯೋತಿಬಾ ಫುಲೆ ಜನ್ಮಜಯಂತಿ ನಿಮಿತ್ತ ಶುಕ್ರವಾರ ಪಟ್ಟಣದ ಜ್ಯೋತಿಬಾ ಫುಲೆ ವೃತ್ತದಲ್ಲಿರುವ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಭಾರತವು ಅಖಂಡತೆಯಲ್ಲಿ ಏಕತೆಯನ್ನು ಸಾರುವ ಸಾಂಸ್ಕೃತಿಕ ದೇಶವಾಗಿದೆ. ಸಮೃದ್ಧ ದೇಶ ಕಟ್ಟುವ ಕಾರ್ಯವನ್ನು ಅನೇಕ ಮಹನೀಯರು ಮಾಡುತ್ತ ಬಂದಿದ್ದಾರೆ. ಅವರ ಸಾಲಿನಲ್ಲಿ ಫುಲೆ ದಂಪತಿಗಳ ಪಾತ್ರ ಮುಖ್ಯವಾಗಿದೆ ಎಂದರು.
ಹಿರಿಯರಾದ ತುಳಜಪ್ಪ ದೇಸತೋಟ, ಬಸವರಾಜ ಬಾಳಿಕಾಯಿ, ಮುತ್ತಪ್ಪ ಕರಲಟ್ಟಿ, ಶಂಕರ ಉಗಾರ, ನಿಂಗಪ್ಪ ಮಾಲಗಾಂವಿ, ಸಂಜು ಹೊಸಮನಿ, ಸಂಜು ಅಥಣಿ ಇದ್ದರು.