ಜಾತ್ರೆ ಅಂಗವಾಗಿ ಜ್ಯೋತಿಬಾ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. 
ಜಿಲ್ಲೆ

ಜ್ಯೋತಿಬಾ ಜಾತ್ರಾ ಮಹೋತ್ಸವ

ವಿಜಯಪುರ: ನಗರದ ಶಿವಾಜಿ ವೃತ್ತದ ಬಳಿಯ ಶ್ರೀ ಜ್ಯೋತಿಬಾ ದೇವರ ಜಾತ್ರಾ ಮಹೋತ್ಸವ ಭಾನುವಾರ ಶ್ರದ್ಧಾ, ಭಕ್ತಿ ಹಾಗೂ ಸಂಭ್ರಮದಿಂದ ನಡೆಯಿತು.

ಬೆಳಗ್ಗೆ ಭಕ್ತಾದಿಗಳಿಂದ ವಿಶೇಷ ಪೂಜೆ ಹಾಗೂ ಅಭಿಷೇಕ ಬಳಿಕ ಪಲ್ಲಕ್ಕಿ ಉತ್ಸವ ನಡೆಯಿತು. ಜಿಲ್ಲೆಯ ವಿವಿಧ ಊರುಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಕೃತಾರ್ಥರಾದರು. ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ದೇವಸ್ಥಾನ ಕಮಿಟಿ ಸದಸ್ಯ ಸುರೇಶ ಗೋಲಾಂಡೆ, ಶಿವಾಜಿ ಮೋರೆ, ಮುಕುಂದ ಸಾಳುಂಕೆ, ಶಿವಾಜಿ ಗಾಯಕವಾಡ, ದಯಾನಂದ ಗಾಯಕವಾಡ, ಪ್ರಭು ಕೋರಿಶೆಟ್ಟಿ, ಜಾನು ಸಾಗರ ಮತ್ತಿತರರಿದ್ದರು.