ಕಲಾಶ್ರೀ ಶಿಕ್ಷಣ ಪ್ರೇಮಿ ಬಳಗ ಮತ್ತು ಇಂದುಶ್ರೀ ಮಹಿಳಾ ಸಂಘ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ದೀಪದಿಂದ ಜ್ಯೋತಿ ಹಚ್ಚುವ ಕಾರ್ಯಕ್ರಮ ನಡೆಯಿತು 
ಜಿಲ್ಲೆ

ಗಂಗೊಳ್ಳಿಯಲ್ಲಿ ಜ್ಯೋತಿ ಬೆಳಗುವ ಕಾರ್ಯಕ್ರಮ

ಇಂದಿರಾ ಎನ್ ಕೆ

ಗಂಗೊಳ್ಳಿ: ಇಲ್ಲಿನ ಕಲಾಶ್ರೀ ಶಿಕ್ಷಣ ಪ್ರೇಮಿ ಬಳಗ ಮತ್ತು ಇಂದುಶ್ರೀ ಮಹಿಳಾ ಸಂಘ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ದೀಪದಿಂದ ಜ್ಯೋತಿ ಬೆಳಗುವ ಕಾರ್ಯಕ್ರಮ ಗಂಗೊಳ್ಳಿಯ ಎಸ್.ವಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಭಾನುವಾರ ನಡೆಯಿತು.

ಮುಡೂರ ಅಂಬಾಗಿಲು ಅಧ್ಯಕ್ಷತೆ ವಹಿಸಿದ್ದರು. ರೇಖಾ ಖಾರ್ವಿ ಕಾರ್ಯಕ್ರಮ ಉದ್ಘಾಟಿಸಿದರು. ದೇವಸ್ಥಾನವನ್ನು ನಿತ್ಯವೂ ಸ್ವಚ್ಛಗೊಳಿಸುವ ಮಹಿಳೆಯರಿಗೆ ಸೀರೆ ವಿತರಿಸಲಾಯಿತು. ಪ್ರಮುಖರಾದ ಬಿ.ಸದಾನಂದ ಶೆಣೈ, ಗೋಪಾಲ ಪೂಜಾರಿ, ಸುಮಿತ್ರಾ ಗಂಗೊಳ್ಳಿ, ಸರೋಜ ಜಿ.ಟಿ, ಸುಶೀಲಾ, ಕುಸುಮಾ, ಶಕುಂತಳಾ, ಗಂಗಾ ಜಿ.ಟಿ, ಜಿ.ಈಶ್ವರ, ನರಸಿಂಹ ಕೆ ಮೊದಲಾದವರು ಉಪಸ್ಥಿತರಿದ್ದರು. ಸುಶೀಲಾ ಜಿ.ಟಿ. ಸ್ವಾಗತಿಸಿದರು. ಸುಮಿತ್ರಾ ಜಿ. ಕಾರ್ಯಕ್ರಮ ನಿರ್ವಹಿಸಿದರು. ಕುಸುಮಾ ಜಿ.ಟಿ. ವಂದಿಸಿದರು.