ಕಿಕ್ಕೇರಿ ಗ್ರಾಪಂ ಕಚೇರಿಯಲ್ಲಿ ಶುಕ್ರವಾರ ನಡೆದ ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆಯಲ್ಲಿ ಜ್ಯೋತಿ ದಯಾನಂದ್ ಅವಿರೋಧವಾಗಿ ಆಯ್ಕೆಯಾದರು. ಎಸ್.ಕೆ.ಬಾಲಕೃಷ್ಣ, ಕೆ.ಎಸ್.ಪ್ರಭಾಕರ್, ಐಕನಹಳ್ಳಿ ಕೃಷ್ಣೇಗೌಡ, ಕೆ.ಆರ್.ಕೃಷ್ಣ, ಕೆ.ಬಿ.ಚಂದ್ರಶೇಖರ್, ಕೆ.ಜಿ.ಪುಟ್ಟರಾಜು, ತಾಯಮ್ಮ, ಸರಸ್ವತಿ, ಜ್ಯೋತಿ, ರೇಣುಕಮ್ಮ, ಭಾರತಿ ಇದ್ದರು.  
ಜಿಲ್ಲೆ

ಜ್ಯೋತಿ ದಯಾನಂದ್ ಕಿಕ್ಕೇರಿ ಗ್ರಾಪಂ ಉಪಾಧ್ಯಕ್ಷೆ

ಕಿಕ್ಕೇರಿ: ಕಿಕ್ಕೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಸಿ.ಎಲ್. ಜ್ಯೋತಿ ದಯಾನಂದ್ ಅವಿರೋಧವಾಗಿ ಆಯ್ಕೆಯಾದರು.


ಎರಡನೇ ಅವಧಿಯ ಉಪಾಧ್ಯಕ್ಷರ ಆಯ್ಕೆಯಲ್ಲಿ ಜೆಡಿಎಸ್, ಬಿಜೆಪಿ ಬೆಂಬಲಿತ ಸದಸ್ಯರು ಪಕ್ಷದ ಮುಖಂಡರ ಮಾರ್ಗದರ್ಶನದಂತೆ ಒಡಂಬಡಿಕೆ ಮಾಡಿಕೊಂಡಿದ್ದರು. ಈ ಹಿಂದೆ ಉಪಾಧ್ಯಕ್ಷೆಯಾಗಿದ್ದ ಸಿ.ಬಿ.ಸರಸ್ವತಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಶುಕ್ರವಾರ ಉಪಾಧ್ಯಕ್ಷ ಸ್ಥಾನದ ಚುನಾವಣಾ ಪ್ರಕ್ರಿಯೆ ನಡೆಯಿತು. ಜ್ಯೋತಿ ದಯಾನಂದ್ ಹೊರತುಪಡಿಸಿ ಬೇರ‌್ಯಾರು ಉಮೇದುವಾರಿಕೆ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಅರುಣ್‌ಕುಮಾರ್, ಅವಿರೋಧ ಆಯ್ಕೆ ಘೋಷಿಸಿದರು.


ಚುನಾವನಾ ಸಹಾಯಕರಾಗಿ ಪಿಡಿಒ ಚಲುವರಾಜ್, ಬಾಬು ಕರ್ತವ್ಯ ನಿರ್ವಹಿಸಿದರು.

ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಗ್ರಾಪಂ ಅಧ್ಯಕ್ಷ ಎಸ್.ಕೆ. ಬಾಲಕೃಷ್ಣ, ಸದಸ್ಯ ಕೆ.ಆರ್.ಕೃಷ್ಣ, ಕೆ.ಬಿ.ಚಂದ್ರಶೇಖರ್, ಕೆ.ಜಿ.ಪುಟ್ಟರಾಜು, ತಾಯಮ್ಮ, ಜ್ಯೋತಿ, ರೇಣುಕಮ್ಮ, ಭಾರತಿ, ಮುಖಂಡರಾದ ಐಕನಹಳ್ಳಿ ಕೃಷ್ಣೇಗೌಡ, ಗೋವಿಂದರಾಜು, ಅನಂತ, ಪ್ರಕಾಶ್ ಇದ್ದರು.