ಜಿಲ್ಲೆ

ಜ್ಯೋತಿ ಯುವಕ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ

ಸುನಿಲ್ ಪೊನ್ನೇಟಿ

ಮಡಿಕೇರಿ:
ಮಡಿಕೇರಿಯ ಇಂದಿರಾನಗರದ ಜ್ಯೋತಿ ಯುವಕ ಸಂಘದ ವತಿಯಿಂದ ೭೭ನೇ ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಂಘದ ಸಭಾಂಗಣದಲ್ಲಿ ಊರಿನ ಹಿರಿಯರಾದ ಸಾಜೀದ ಧ್ವಜರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಭಾರತ ದೇಶದ ಮಹಾನ್ ನಾಯಕರ ಅರಿವು ಮೂಡಿಸುವ ಮೂಲಕ ಪೋಷಕರು ಮಕ್ಕಳಿಗೆ ರಾಷ್ಟ್ರ ಪ್ರೇಮ ಮೂಡಿಸಬೇಕು ಎಂದರು.

ನಂತರ ಸ್ವಾತಂತ್ರ್ಯ ದಿನದ ಪ್ರಯುಕ್ತ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸತೀಶ್, ಮಾಜಿ ಅಧ್ಯಕ್ಷ ಜಯಕುಮಾರ್, ಸೋಮಶೇಖರ್, ಮನೋಜ್, ಅನೀಸ್, ಉಪಾಧ್ಯಕ್ಷ ದೀಪಕ್ ಹಾಗೂ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಮಕ್ಕಳು ಹಾಜರಿದ್ದರು.