ಜಿಲ್ಲೆ

ಶ್ರೀಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ನ್ಯಾಯಮೂರ್ತಿ ಭೇಟಿ

ರಾಜಣ್ಣ

ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್‌ಕುಮಾರ್ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.


ಸೋಮವಾರ ಸಂಜೆ 7 ಗಂಟೆಗೆ ದೇವಾಲಯಕ್ಕೆ ಆಗಮಿಸಿದ ದಿನೇಶ್‌ಕುಮಾರ್ ಅವರನ್ನು ದೇವಾಲಯದ ವತಿಯಿಂದ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರಲ್ಲದೆ, ಒಂದೂಕಾಲು ರೂ. ಹಿಡಿದು ಇಷ್ಟಾರ್ಥ ಈಡೇರಲಿ ಎಂದು ಪ್ರಾರ್ಥಿಸಿ, ತೀರ್ಥ ಪ್ರಸಾದ ಸ್ವೀಕರಿಸಿದರು.


ಇದೇ ಸಂದರ್ಭದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಧಾನ ಅರ್ಚಕ ಪ್ರದೀಪ್‌ಆಚಾರ್ಯ ಅವರಿಗೆ ಶುಭಾಶಯ ಕೋರಿ ಬೆಂಗಳೂರಿಗೆ ತೆರಳಿದರು.
ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಮನ್‌ಮುಲ್ ನಿರ್ದೇಶಕಿ ರೂಪಾ, ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್, ಕನ್ನಡ ಸೇನೆಯ ಮಂಜುನಾಥ್, ಸಹಾಯಕ ಅರ್ಚಕ ಸುರೇಶ್ ಆಚಾರ್ಯ ಇದ್ದರು.