ಜಿಲ್ಲೆ

ನೇಹಾಳ ಸಾವಿಗೆ ನ್ಯಾಯ ಆಗ್ರಹಿಸಿ ಮೌನ ಪ್ರತಿಭಟನೆ

Mangaluru - Prakash MC Manjeshwar

ಮಂಗಳೂರು: ಹುಬ್ಬಳ್ಳಿಯಲ್ಲಿ ದುಷ್ಕರ್ಮಿಯಿಂದ ಹತ್ಯೆಗೀಡಾದ ನೇಹಾಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಮಂಗಳೂರಿನ ಜನಧ್ವನಿ ವತಿಯಿಂದ ಭಾನುವಾರ ರಾತ್ರಿ ನಗರದ ಲಾಲ್‌ಭಾಗ್ ಬಳಿಯ ಗಾಂಧಿ ಪ್ರತಿಮೆ ಮುಂಭಾಗದಲ್ಲಿ  ಮೋಂಬತ್ತಿ ಹಿಡಿದು ಮೌನ ಪ್ರತಿಭಟನೆ ನಡೆಯಿತು.
ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ.ಮಂಜುಳಾ ರಾವ್, ಪ್ರಮುಖರಾದ ಪೂರ್ಣಿಮಾ, ಪೂಜಾ ಪೈ, ಸುಮನಾ ಶರಣ್, ಸುಮಂಗಲಾ ರಾವ್, ಸಂಗೀತಾ ಆರ್.ನಾಯಕ್, ನಂದನ್ ಮಲ್ಯ, ರಕ್ಷಿತ್ ಕೊಟ್ಟಾರಿ, ಸಂಧ್ಯಾ ವೆಂಕಟೇಶ್, ಕವಿತಾ ಸನಿಲ್ ಮತ್ತಿತರರು ಉಪಸ್ಥಿತರಿದ್ದರು.