ಬಾಗಲಕೋಟೆ ನಗರದ ಬಿಜಿಪಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬಿಜೆಪಿ ಎಸ್ಪಿ ಮೋರ್ಚಾ ಹಮ್ಮಿಕೊಂಡಿದ್ದ ಭೀಮ ಸಮಾವೇಶ ಬಿಜೆಪಿ ರಾಜ್ಯ ವಕ್ತಾರ, ವಿ.ಪ. ಸದಸ್ಯ ಚಲವಾದಿ ನಾರಾಯಣ ಸ್ವಾಮಿ ಉದ್ಘಾಟಿಸಿದರು. ಮಾಜಿ ಸಚಿವ ಎನ್. ಮಹೇಶ, ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಲಾ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಕಾಶ ಕಾಳೆ, ಮುಖಂಡರಾದ ಬಸವರಾಜ ಯಂಕಂಚಿ, ಗೀತಾ ಕುಗನೂರ ಇತರರು ಇದ್ದರು 
ಜಿಲ್ಲೆ

ಬಿಜೆಪಿಯಿಂದ ದಲಿತರಿಗೆ ನ್ಯಾಯ

ದತ್ತಾತ್ರೇಯ ಪಿ ಕುಲಕರ್ಣಿ

ಬಾಗಲಕೋಟೆ: ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಿಜೆಪಿ ಪಕ್ಷ ಚಿಂತನೆಗಳು ಎರಡು ಏಕರೂಪವಾಗಿವೆ. ಅನೇಕ ವಿಷಯದಲ್ಲಿ ಸಾಮ್ಯತೆ ಹೊಂದಿವೆ. ಬಿಜೆಪಿ ಬಲಗೊಂಡಲ್ಲಿ ದಲಿತ ಸಮುದಾಯಕ್ಕೆ ಸಮರ್ಪಕ ನ್ಯಾಯ ದೊರೆಯಲು ಸಾಧ್ಯ ಎಂದು ಬಿಜೆಪಿ ರಾಜ್ಯ ವಕ್ತಾರ, ವಿ.ಪ ಸದಸ್ಯ ಚಲವಾದಿ ನಾರಯಣ ಸ್ವಾಮಿ ಹೇಳಿದರು.

ನಗರದ ಬಿಜಿಪಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬಿಜೆಪಿ ಎಸ್ಪಿ ಮೋರ್ಚಾ ಹಮ್ಮಿಕೊಂಡಿದ್ದ ‘ಭೀಮ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿ, ದೇಶಕ್ಕೆ ಸ್ವಾತಂತ್ರೃ ಬಂದು ಇಲ್ಲಿಯ ವರೆಗೆ ಕಾಂಗ್ರೆಸ್ ಪಕ್ಷ ಅಂಬೇಡ್ಕರ ಅವರನ್ನು ಕೇವಲ ವೋಟಿಗಾಗಿ ಬಳಸಿಕೊಂಡಿದ್ದಾರೆ. ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅಂಬೇಡ್ಕರ ಅವರ ಜನ್ಮಸ್ಥಳ, ಶಿಕ್ಷಣ ಪಡೆದ ಸ್ಥಳ, ಪರಿನಿರ್ವಾಣ ಸ್ಥಳ, ಅವರ ದೀಕ್ಷಾಭೂಮಿ, ಚೆತ್ಯ ಭೂಮಿ ಸೇರಿದಂತೆ ಐದು ಪವಿತ್ರ ಸ್ಥಳಗಳನ್ನು ಅಭಿವೃದ್ಧಿ ಪಡಿಸಿದರು. 2010 ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೆಂದ್ರ ಮೋದಿ ಸಂವಿಧಾನದ ಪ್ರತಿಯನ್ನು ಆನೆಯ ಮೇಲಿಟ್ಟು ಗೌರವ ಯಾತ್ರೆ ಮಾಡಿದರು. ಇಂದು ರಾಜ್ಯದಲ್ಲಿ ಸಿದ್ದರಾಮಯ್ಯ ಅದನ್ನೇ ಕಾಪಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕರ್ನಾಟಕದಲ್ಲಿಯೂ ಕೂಡಾ ಡಾ. ಬಿ.ಆರ್. ಅಂಬೇಡ್ಕರ ಅವರು ಭೇಟಿ ನೀಡಿದ ಏಳು ಜಿಲ್ಲೆಯ 10 ಸ್ಥಳಗಳನ್ನು ಅಭಿವೃದ್ಧಿ ಮಾಡುವ ಯೋಜನೆ ಬಿಜೆಪಿ ಪಕ್ಷಕ್ಕೆ ಇದೆ. ಸಂವಿಧಾನ ಕುರಿತು ವಿಧಾನ ಮಂಡಲದಲ್ಲಿ ಸುಧೀರ್ಘ ಚರ್ಚೆ ಮಾಡಿದ್ದು ಬಿಜೆಪಿ. ಕಾಂಗ್ರೆಸ್ ಏನೂ ಮಾಡಿಲ್ಲ. ಬಿಜೆಪಿ ಪಕ್ಷ ಬೆಂಬಲಿಸುವ ಮೂಲಕ ಅಂಬೇಡ್ಕರ ಅವರ ಆಶಯ ಈಡೇರಿಸಿಕೊಳ್ಳಬೇಕು ಎಂದು ಹೇಳಿದರು.

ಮಾಜಿ ಸಚಿವ ಎನ್. ಮಹೇಶ ಮಾತನಾಡಿ, ‘ಕತ್ತೆ ನಿಂತರು ಕಾಂಗ್ರೆಸ್ ಗೆಲ್ಲುತ್ತದೆ’ ಎನ್ನುವ ಕಾಲ ಕಳೆದು ಹೋಗಿದೆ. ದಲಿತರು ಕಾಂಗ್ರೆಸ್ ಬೆಂಬಲಿಸಿದಲ್ಲಿ ಆತ್ಮಹತ್ಯೆ ಮಾಡಿಕೊಂಡಂತೆ. ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ವಂಚನೆ ಮಾಡುತ್ತದೆ. ಬಿಜೆಪಿ ಹಾಗೇ ಇಲ್ಲ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ನಡೆಯುತ್ತದೆ. ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ ಅವರಿಗೆ ಹೇಗೆ ವಂಚನೆ ಮಾಡಿದ್ದಾರೆ ಎಲ್ಲರಿಗೂ ಗೊತ್ತಿದೆ ಎಂದರು.

ಬಿಜೆಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಲಾ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಕಾಶ ಕಾಳೆ, ಮುಖಂಡರಾದ ಬಸವರಾಜ ಯಂಕಂಚಿ, ಗೀತಾ ಕುಗನೂರ, ಡಾ. ಕ್ರಾಂತಿಕಿರಣ, ಡಾ. ಸ್ಪಂದನ ವಿಜಯಪುರ, ಶಿವಾನಂದ ಟವಳಿ ವೇದಿಕೆಯಲ್ಲಿದ್ದರು.