ಜಿಲ್ಲೆ

ನ್ಯಾಯದಾನ ಮಾಡಿದ ತೃಪ್ತಿ ನನಗಿದೆ

ಎಂ.ಎಸ್​.ಹಿರೇಮಠ ಬೆಳಗಾವಿ

ಗೋಕಾಕ: ಗೋಕಾಕದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ ನ್ಯಾಯದಾನ ಮಾಡಿದ ತೃಪ್ತಿ ನನಗಿದೆ ಎಂದು ಪ್ರಧಾನ ಜೆಎಂಎ್​ಸಿ ಮತ್ತು ಸಿವಿಲ್​ ನ್ಯಾಯಾಧೀಶ ರಾಜೀವ್​ ಗೊಳಸಾರ ಹೇಳಿದರು.

ಪಟ್ಟಣದಲ್ಲಿ ವಕೀಲರ ಸಂ ಸೋಮವಾರ ಹಮ್ಮಿಕೊಂಡಿದ್ದ ವರ್ಗಾವಣೆಗೊಂಡ ನ್ಯಾಯಾಧೀಶರ ಬೀಳ್ಕೂಡುಗೆ ಸಮಾರಂಭದಲ್ಲಿ ಮಾತನಾಡಿ, ಸೇವಾ ಅವಧಿಯಲ್ಲಿ ಸಂದ ಸದಸ್ಯರು ನೀಡಿದ ಸಹಕಾರದಿಂದ ಸಾಕಷ್ಟು ಪ್ರಕರಣ ಕಾನೂನಾತ್ಮಕವಾಗಿ ಮತ್ತು ರಾಜಿ ಸಂಧಾನಗಳ ಮೂಲಕ ಇತ್ಯರ್ಥ ಪಡಿಸಲು ನೆರವಾಯಿತು ಎಂದು ಸ್ಮರಿಸಿದರು.

ಪ್ರಧಾನ ಹಿರಿಯ ಸಿವಿಲ್​ ನ್ಯಾಯಾಧೀಶ ಉಮೇಶ ಆತ್ನೂರೆ ಮಾತನಾಡಿ, ನ್ಯಾಯಾಂಗ ಇಲಾಖೆ ಅಧಿಕಾರಿಗಳು ಮತ್ತು ವಕೀಲರ ಮಧ್ಯೆದ ಅವಿನಾಭಾವ ಸಂಬಂಧ ಪ್ರಕರಣಗಳ ಶ್ರೀ ಇತ್ಯರ್ಥಕ್ಕೆ ಸಹಾಯಕಾರಿಯಾಗುತ್ತದೆ ಎಂದು ತಿಳಿಸಿದರು.

ವಕೀಲರ ಸಂದ ಅಧ್ಯ ಸುಭಾಸಚಂದ್ರ ಪಾಟೀಲ ಮಾತನಾಡಿ, ವಕೀಲರ ಸಂದ ಸದಸ್ಯರು ಹಾಗೂ ನ್ಯಾಯಾಧೀಶರ ನಡುವಣ ಸಮನ್ವಯತೆ ವೃತ್ತಿ ನತೆ ಎತ್ತಿ ಹಿಡಿಯಲು ಸಾಧ್ಯವಾಗುತ್ತದೆ ಎಂದರು. ಹೆಚ್ಚುವರಿ ಹಿರಿಯ ಶ್ರೇಣಿ ಸಿವಿಲ್​ ನ್ಯಾಯಾಧೀಶ ಮಹಾದೇವ ಆತ್ನೂರೆ ಹಾಗೂ ವಕೀಲರ ಸಂದ ಪದಾಧಿಕಾರಿಗಳು ಇದ್ದರು. ಶಂಕರ ಗೋರೋಶಿ ನಿರೂಪಿಸಿದರು.