ವಿಜಯಪುರದ ಕನಕ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಪ್ರೊ. ಎ.ಎಚ್​. ಕೊಳಮಲಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಜಯಪ್ರಭು ಕೊಳಮಲಿ ಇದ್ದರು. 
ಜಿಲ್ಲೆ

ಗುರು ಜಗತ್ತಿನ ಅದ್ಭುತ ಶಕ್ತಿ

ವಿಜಯಪುರ: ಕಲ್ಲಿನಂತಿದ್ದ ವ್ಯಕ್ತಿಗೆ ತಮ್ಮದೇ ಆದ ವಿಶಿಷ್ಟ ಶಕ್ತಿಯ ಮೂಲಕ ಸುಂದರ ಮೂರ್ತಿಯಾಗಿಸಿ ಜಗತ್ತಿಗೆ ಅರ್ಪಿಸಿದ ಕೀರ್ತಿ ಗುರುಗಳಿಗೆ ಸಲ್ಲುತ್ತದೆ. ಗುರು ಈ ಜಗತ್ತಿನ ಅದ್ಭುತವಾದ ಶಕ್ತಿ ಎಂದು ಜಾನಪದ ವಿದ್ವಾಂಸ, ಸಾಹಿತಿ ಪ್ರೊ. ಎ.ಎಚ್​. ಕೊಳಮಲಿ ಹೇಳಿದರು.

ನಗರದ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಕನಕ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಗುರುಪೂರ್ಣಿಮೆ ನಿಮಿತ್ತ ಇತ್ತೀಚೆಗೆ ನಡೆದ "ಗುರುವಿಗೆ ನಮನ' ಎಂಬ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೇಣದ ಬತ್ತಿಯು ತನ್ನ ದೇಹವನ್ನು ತಾನೇ ಸುಟ್ಟುಕೊಂಡು ಜಗತ್ತಿಗೆ ಬೆಳಕು ನೀಡುವ ಹಾಗೆಯೇ ಗುರುಗಳು ಕೂಡ ತಮ್ಮ ಶ್ರೇಷ್ಠವಾದ ಕರ್ತವ್ಯವನ್ನು ನಿರ್ವಹಿಸುವ ಮೂಲಕ ಜಗತ್ತಿಗೆ ಮಾದರಿಯಾಗಿದ್ದು, ಗುರುಗಳಿಗೆ ಜಗತ್ತಿನಲ್ಲಿ ಪೂಜ್ಯನಿಯ ಸ್ಥಾನವಿದೆ ಎಂದು ಅವರು ಹೇಳಿದರು.

ಸಂಸ್ಥೆ ಅಧ್ಯಕ್ಷ ಜಯಪ್ರಭು ಕೊಳಮಲಿ ಮಾತನಾಡಿದರು. ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ವರ್ಗ ಮತ್ತಿತರರಿದ್ದರು.