ಬ್ರಹ್ಮಾವರ: ಕೌಶಲದ ಕೆಲಸಕ್ಕೆ ಎಲ್ಲ ಕಡೆಯಲ್ಲಿ ಮಾನ್ಯತೆ ಇರುತ್ತದೆ ಎಂದು ಕೆನರಾ ಬ್ಯಾಂಕ್ ವೃತ್ತ ಕಚೇರಿಯ ವಿಭಾಗೀಯ ವ್ಯವಸ್ಥಾಪಕ ಮನೋಜ್ ಬೋಯರ್ ಹೇಳಿದರು.
ಶುಕ್ರವಾರ ಬ್ರಹ್ಮಾವರದ ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಆಶ್ರಯದಲ್ಲಿ 35 ದಿನಗಳ ಕಾಲ ನಡೆದ ಜೂನಿಯರ್ ಬ್ಯೂಟಿ ಪ್ರಾಕ್ಟಿಷನರ್ ತರಬೇತಿ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಡಾ.ಬೊಮ್ಮಯ್ಯ ಎಂ.ಅಧ್ಯಕ್ಷತೆ ವಹಿಸಿದ್ದರು. ಉಡುಪಿಯ ಕೆನರಾ ಬ್ಯಾಂಕ್‌ನ ಹರೀಶ್ ಜಿ., ಸಂಜೀವ ಕಾಂಭಳೆ, ಅಭಿಷೇಕ್, ರಿತೇಶ್, ಮೀರಾ, ಮಾಧವಿ ರೈ, ರೇಖಾ ಉಪಸ್ಥಿತರಿದ್ದು ಶಿಬಿರಾರ್ತಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಉಪನ್ಯಾಸಕಿ ಚೈತ್ರ ಕೆ. ಸ್ವಾಗತಿಸಿ, ಉಪನ್ಯಾಸಕ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಕಚೇರಿ ಸಹಾಯಕ ಶಾಂತಪ್ಪ ವಂದಿಸಿದರು.