ಅಬ್ದುಲ್ ರಹಿಮಾನ್  
ಜಿಲ್ಲೆ

ಆರೋಪಿಗೆ ನ್ಯಾಯಾಂಗ ಬಂಧನ :ಬಚ್ಚಲು ಮನೆಗೆ ಇಣುಕಿ ನೋಡಿದ ಪ್ರಕರಣ

ಇಂದಿರಾ ಎನ್ ಕೆ

ಉಪ್ಪಿನಂಗಡಿ: ಯುವತಿಯೋರ್ವಳು ಸ್ನಾನ ಮಾಡುತ್ತಿದ್ದಾಗ ಬಚ್ಚಲು ಕೋಣೆಯ ಹೊರಭಾಗದ ಕಿಟಕಿಯಿಂದ ಇಣುಕಿ ನೋಡಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು ಪೊಲೀಸ್ ವಶವಾದ ಇಲ್ಲಿನ ಪೆರಿಯಡ್ಕ ನಿವಾಸಿ ಅಬ್ದುಲ್ ರಹಿಮಾನ್(41)ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಜು.21ರಂದು ರಾತ್ರಿ ಪೆರಿಯಡ್ಕದ ಯುವತಿ ಸ್ನಾನ ಮಾಡುತ್ತಿದ್ದಾಗ ಹೊರಗಡೆಯಿಂದ ಶಬ್ದ ಬಂದಿದ್ದು, ಈಕೆ ಈ ಬಗ್ಗೆ ತಾಯಿಗೆ ಮಾಹಿತಿ ನೀಡಿ ಪರಿಶೀಲಿಸಿದಾಗ ಆರೋಪಿ ಅಬ್ದುಲ್ ರಹಿಮಾನ್ ಕಾಂಪೌಂಡ್ ಹಾರಿ ಪರಾರಿಯಾಗಲು ಯತ್ನಿಸಿದ್ದ. ಈತ ಎಸ್‌ಡಿಪಿಐ ಸಕ್ರಿಯ ಕಾರ್ಯಕರ್ತ ಎನ್ನಲಾಗಿದ್ದು , ಈ ಹಿಂದೆ ಪರಿಸರದಲ್ಲಿ ನಡೆದ ರಾತ್ರಿ ವೇಳೆ ಮನೆಗೆ ನುಗ್ಗುವ ಕೃತ್ಯಗಳಲ್ಲಿ ಈತನ ಪಾತ್ರದ ಬಗೆಗಿನ ಶಂಕೆಯ ಬಗ್ಗೆ ಇಲಾಖೆ ತನಿಖೆ ನಡೆಯುತ್ತಿದೆ