ಜಿಲ್ಲೆ

ಸಂವಿಧಾನಕ್ಕೆ ತಲೆಬಾಗುವುದೇ ಮೌಲ್ಯ

ರಮೇಶ ಮೇಳಕುಂದಾ

ಕಲಬುರಗಿ: ಎಲ್ಲಿಯವರೆಗೆ ಸಂವಿಧಾನಕ್ಕೆ ತಲೆ ಬಾಗುತ್ತೇವೆಯೋ ಅಲ್ಲಿಯವರೆಗೆ ಸಂವಿಧಾನ ಉಳಿಯುತ್ತದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಗೌರವ ನೀಡುವುದು ಮೌಲ್ಯಗಳಿಂದ ಬರುತ್ತದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್.ಇಂದಿರೇಶ ಹೇಳಿದರು.

ನಗರದ ಹೊರವಲಯದಲ್ಲಿನ ಅಮೃತ ಸರೋವರದ ಬ್ರಹ್ಮಕುಮಾರಿಸ್‌ನ ರಿಟ್ರೀಟ್ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ `ಕಾನೂನು ಮತ್ತು ನ್ಯಾಯಾಂಗ ಸಂಸ್ಥೆಗಳಲ್ಲಿ ಅಧ್ಯಾತ್ಮ ಸಬಲೀಕರಣ' ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಸಂವಿಧಾನದ ಕಾರಣದಿಂದಲೇ ೧೪೦ ಕೋಟಿ ಜನ ನೆಮ್ಮದಿಯಿಂದ ಜೀವಿಸುತ್ತಿದ್ದಾರೆ. ಅದಕ್ಕೆ ತಲೆ ಬಾಗುವುದೇ ಅಧ್ಯಾತ್ಮ, ಗೌರವ ಎಂದು ಹೇಳಿದರು.

ಇಂದೋರ್‌ನ ಕಾನೂನು ವಿಭಾಗದ ಉಪಾಧ್ಯಕ್ಷ ನ್ಯಾಯಮೂರ್ತಿ ಬಿ.ಡಿ.ರಾಠಿ ಮಾತನಾಡಿ, ಸಮಾಜದ ಪ್ರತಿ ವ್ಯಕ್ತಿಗೂ ನ್ಯಾಯಾಂಗ ಸಂಬAಧಿಸಿದೆ. ಕಾನೂನು ರಚನೆ, ತಿದ್ದುಪಡಿ, ಪಾಲನೆಯಲ್ಲಿ ಅಧ್ಯಾತ್ಮದ ಸ್ಪರ್ಷ ಅವಶ್ಯವಿದೆ. ಪ್ರತಿ ವ್ಯಕ್ತಿಯಲ್ಲಿ ಮಾನವೀಯ ಮೌಲ್ಯವಿದ್ದರೆ ನ್ಯಾಯಾಂಗದ ಅವಶ್ಯವೇ ಬರುವುದಿಲ್ಲ ಎಂದರು.

ಬಿ.ಕೆ.ವಿಜಯಾ ದಿದಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಬೆಳಗಾವಿಯ ನ್ಯಾಯಮೂರ್ತಿ ಎ.ಎಸ್.ಪಚಾಪುರೆ, ಮೌಂಟ್ ಅಬುವಿನ ಬಿ.ಕೆ.ಲತಾ ಅಗರವಾಲ್, ನ್ಯಾಯಾಧೀಶೆ ಎಸ್. ನಾಗಶ್ರೀ, ನವದೆಹಲಿಯ ಬಿ.ಕೆ.ಪುಷ್ಪಾ, ಹೈದರಾಬಾದ್‌ನ ನ್ಯಾಯಮೂರ್ತಿ ವಿ.ಈಶ್ವರಯ್ಯ, ನಗರ ಪೊಲೀಸ್ ಆಯುಕ್ತ ಆರ್.ಚೇತನ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಗುಪ್ತಲಿಂಗ ಪಾಟೀಲ್, ಕೆಎಸ್‌ಆರ್‌ಪಿಯ ಬಸವರಾಜ ಜಿಳ್ಳೆ, ಸಿಎ ಸಂಘದ ಮಲ್ಲಿಕಾರ್ಜುನ ಮಹಾಂತಗೋಳ, ಪ್ರಮುಖರಾದ ಬಿ.ಕೆ.ಪ್ರೇಮ್ ಬಾಯ್, ಬಿ.ಎಕೆ.ಶಿವಲೀಲಾ, ನಿಧಿ ಅಗರವಾಲ್, ನಲ್ಮಲ್ ಬಾಯ್, ವಿದ್ಯಾ ಬೆಹೇನ್, ಬಿ.ಕೆ.ರಾಗಿಣಿ ಇತರರಿದ್ದರು.