judgment 
ಜಿಲ್ಲೆ

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಜೈಲು ಶಿಕ್ಷೆ

Kopala - Raveendra V K

ಕೊಪ್ಪಳ: ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ ನಾನು ಪಾಟೀಲ್ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ, ತ್ವರಿತ ವಿಲೇವಾರಿ ನ್ಯಾಯಾಧೀಶ (ಪೋಕ್ಸೋ) ಕುಮಾರ ಡಿ.ಕೆ. 3 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ಶಿಕ್ಷಕ ಅಂಧನಾಗಿದ್ದು, ಸಂಗೀತ ಶಿಕ್ಷಕನಾಗಿದ್ದ. ತನಗೆ ಕಣ್ಣು ಕಾಣುವುದಿಲ್ಲ. ನನ್ನನ್ನು ಕರೆದುಕೊಂಡು ಹೋಗು ಎಂದು ಬಾಲಕಿಯಲ್ಲಿ ವಿನಂತಿಸಿದ್ದಾನೆ. ಬಾಲಕಿ ಕೋಣೆಗೆ ಕರೆದೊಯ್ದಗ ಲೈಂಗಿಕ ಕಿರುಕುಳ ನೀಡಿದ್ದಾನೆ. ಎದೆ, ಮೈ, ಕೈ ಮುಟ್ಟಿ ಎಳೆದಾಡಿದ್ದಾನೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಡಿವೈಎಸ್ಪಿ ಶ್ರೀಕಾಂತ ಕಟ್ಟಿಮನಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷಕ ನಾನು ಪಾಟೀಲ್ ಅಪರಾಧಿಯೆಂದು ಪರಿಗಣಿಸಿ 3 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿದೆ.

ಸರ್ಕಾರ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕಿ ಬಂಡಿ ಅಪರ್ಣಾ ಮನೋಹರ ವಾದ ಮಂಡಿಸಿದ್ದರು.