ನ್ಯಾಯಾಲಯದ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂಗನವಾಡಿಗಳ ಮೂಲ ಸೌಕರ್ಯಗಳು ಹಾಗೂ ಅಲ್ಲಿನ ಕುಂದು ಕೊರತೆಗಳ ಕುರಿತು ಪರಿಶೀಲಿಸಲು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶಿಸಿದೆ. ಹಾಗೆಯೇ ಮಾಧ್ಯಮಗಳಿಗೆ ಮಾಹಿತಿ ನೀಡಲು ಸೂಚಿಸಿದೆ. ಚಿಕ್ಕಬಳ್ಳಾಪುರ ತಾಲೂಕಿನ 10 ಅಂಗನವಾಡಿಗಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಭೇಟಿ ನೀಡಿ ಪರಿಶೀಲಿಸಲಾಗಿದೆ. ಬಹುತೇಕ ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಆಟಿಕೆಗಳ ಪೂರೈಕೆ, ಪೌಷ್ಠಿಕ ಆಹಾರ ಪೂರೈಕೆ ಸೇರಿದಂತೆ ಮೂಲ ಸೌಕರ್ಯಗಳ ಕೊರತೆಯಿಂದ ಕೇಂದ್ರಗಳು ನಲುಗುತ್ತಿವೆ. ಮಕ್ಕಳಿಗೆ ಮೊಟ್ಟೆ, ತರಕಾರಿ ಸಹಿತ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿಲ್ಲ. ತರಕಾರಿ ಇಲ್ಲದ ಉಪ್ಪಿಟ್ಟು, ಮಿಲೆಟ್ ಉಂಡೆಗಳನ್ನು ಮಕ್ಕಳು ತಿನ್ನುತ್ತಿಲ್ಲ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಗರ್ಭಿಣಿಯರು, ಮಕ್ಕಳು ಅಂಗನವಾಡಿಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದರು. ಕೇಂದ್ರಗಳಲ್ಲಿನ ಕುಂದುಕೊರತೆಗಳನ್ನು ಸರಿಪಡಿಸಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದೆ ಎಂತಲೂ ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಕೆ. ಉಮೇಶ್ ಖುದ್ದು ವೀಕ್ಷಿಸಿದ್ದು ಮಕ್ಕಳಿಗೆ ಮೂಲಭೂತ ಸೌಕರ್ಯಗಳು ಹಾಗೂ ಪೌಷ್ಠಿಕ ಆಹಾರ ವಿತರಣೆಯು ಸಮರ್ಪಕವಾಗಿಲ್ಲ ಎಂದು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಭಾಗದಲ್ಲಿನ ಅಂಗನವಾಡಿಗಳಲ್ಲಿನ ಅವ್ಯವಸ್ಥೆಯನ್ನು ಸ್ವತಃ ನ್ಯಾಯಾಧೀಶರೇ ವೀಕ್ಷಿಸಿ, ಸಮಸ್ಯೆಗಳ ದೊಡ್ಡ ಪಟ್ಟಿಯ ಮಾಹಿತಿ ನೀಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ 10 ಅಂಗನವಾಡಿ ಕೇಂದ್ರಗಳಲ್ಲಿನ ಅವ್ಯವಸ್ಥೆಯನ್ನು
ಅಂಗನವಾಡಿ ಕೇಂದ್ರಗಳಲ್ಲಿ ಖರೀದಿಸುವ ವಸ್ತುಗಳ ರಸೀದಿ ಪುಸ್ತಕ ಬಳಕೆ ಇಲ್ಲದಿರುವುದು, ಬಹಳಷ್ಟು ಕೇಂದ್ರಗಳಲ್ಲಿ ಅಂಗನವಾಡಿ ಶಿಕ್ಷಕರು ಅಲ್ಲಿನ ಅಡುಗೆ ಸಹಾಯಕರನ್ನು ಕೇಂದ್ರಗಳಲ್ಲಿ ಬಿಟ್ಟು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ, ಹೊರಗಡೆ ಹೋಗುವುದು, 2022 ನೇ ಸಾಲಿನಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಅಂಗನವಾಡಿ ಕೇಂದ್ರಗಳಿಗೆ ಪರಿಶೀಲನೆಗಾಗಿ ತೆರಳದಿರುವುದು ಹಾಗೂ ಸಂದರ್ಶನ ಪುಸ್ತಕದಲ್ಲಿ ಅವರ ಸಹಿ ಮತ್ತು ಮಾಹಿತಿ ಇಲ್ಲದೇ ಇರುವುದು ಕಂಡು ಬಂದಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಅಂಗನವಾಡಿಗಳ ಶಿಕ್ಷಕಿಯರು, ಅಡುಗೆ ಸಹಾಯಕಿಯರು ಕರ್ತವ್ಯ ಪಾಲನೆಯನ್ನು ಸಮರ್ಪಕವಾಗಿ ಮಾಡದಿರುವುದು ಕಂಡು ಬಂದಿದೆ. ಕೆಲವೆಡೆ ಅಡುಗೆ ಸಹಾಯಕಿಯರೇ ಕೇಂದ್ರಗಳನ್ನು ನಡೆಸುತ್ತಿದ್ದು ಶಿಕ್ಷಕಿಯರು ಗೈರು ಹಾಜರಾಗಿದ್ದಾರೆ. ವಾರ ಕಳೆದರೂ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿದಲ್ಲ. ಮಕ್ಕಳ ಹಾಜರಾತಿಯನ್ನು ತಪ್ಪಾಗಿ ನೀಡಲಾಗುತ್ತಿದೆ. ಹಾಜರಾದ ಸಿಬ್ಬಂದಿಯನ್ನು ವಿಚಾರಿಸಿದರೆ ಅಂಗನವಾಡಿ ನಡೆಸಲು ಸರ್ಕಾರ ನೀಡುತ್ತಿರುವ ಅನುದಾನ ಸಾಕಾಗಲ್ಲ. ಈ ಹಿಂದಿನ ಆಹಾರ ಪದಾರ್ಥಗಳು, ತರಕಾರಿ ಸೌಲಭ್ಯಗಳು ಪ್ರಸ್ತುತ ಸಿಗದೃ ಇರುವ ಕಾರಣ ಹೆಚ್ಚು ಮಂದಿ ಮಕ್ಕಳು ಬಾಣಂತಿಯರು, ಗರ್ಭಿಣಿಯರು ಅಂಗನವಾಡಿ ಕೇಂದ್ರಗಳಿಗೂ ಭೇಟಿ ನೀಡುತ್ತಿಲ್ಲ ಎಂದು ನ್ಯಾಯಾಧೀಶರು ಮಾಹಿತಿ ನೀಡಿದ್ದಾರೆ.
*ಸಿಬ್ಬಂದಿ ಹಾಜರಾತಿ ಇಲ್ಲ*
ಈ ಹಿಂದೆ ಮೊಳಕೆ ಕಾಳು, ತರಕಾರಿ ಸಂಬಾರು ಪೂರೈಕೆಯಾಗುತ್ತಿದ್ದು, ಪ್ರಸ್ತುತ ಪ್ರತಿ ಮಗುವಿಗೆ ತರಕಾರಿಗಾಗಿ 2 ರೂ ನೀಡುತ್ತಿದ್ದು, ಇದರಿಂದ ತರಕಾರಿ ಖರೀದಿಸಲು ಆಗುತ್ತಿಲ್ಲ ಎಂಬುದು ತಿಳಿದು ಬಂದಿದೆ. ಬಹಳಷ್ಟು ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲದ ಕಾರಣ ಮಕ್ಕಳಿಗೆ ಶುದ್ದ ಕುಡಿಯುವ ನೀರು ಸಿಗುತ್ತಿಲ್ಲ. ಮಕ್ಕಳಿಗೆ ನಲಿ-ಕಲಿ ಅಡಿಯಲ್ಲಿ ಆಟೋಪಕರಣಗಳು ಇಲ್ಲದಿರುವುದು ನ್ಯಾಯಾಧೀಶರ ಭೇಟಿ ಸಂದರ್ಭದಲ್ಲಿ ಗೊತ್ತಾಗಿದೆ.
*ಕೇಂದ್ರಗಳಿಗೆ ಏನು ಸಾಕಾಗುತ್ತಿಲ್ಲ*