ಕುಕನೂರು ಪಟ್ಟಣದಲ್ಲಿ ನೂತನ ಸಿವಿಲ್ ನ್ಯಾಯಾಲಯ ಕಟ್ಟದ ಕಾಮಗಾರಿಯನ್ನು ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ ವಿ.ಶ್ರೀಶಾನಂದ ಭಾನುವಾರ ವೀಕ್ಷಣೆ ಮಾಡಿದರು. ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶ ಹನಮಂತಪ್ಪ, ಯಲಬುರ್ಗಾದ ಜೆಎಂಎಫ್‌ಸಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಕನ್ನೂರ, ಯಲಬುರ್ಗಾ ಜೆಎಂಎಫ್‌ಸಿ ನ್ಯಾಯಾಧೀಶೆ ಆಯಷಾಬಿ ಮಜೀದ್, ಎಸಿ ಮಹೇಶ ಮಾಲಗಿತ್ತಿ ಇದ್ದರು. 
ಜಿಲ್ಲೆ

ನೂತನ ನ್ಯಾಯಾಲಯ ಶೀಘ್ರ ಕಾರ್ಯಾರಂಭ; ನ್ಯಾಯಾಧೀಶ ವಿ.ಶ್ರೀಶಾನಂದ ಹೇಳಿಕೆ

ಕುಕನೂರು: ಪಟ್ಟಣದಲ್ಲಿ ನೂತನ ನ್ಯಾಯಾಲಯವನ್ನು ಶೀಘ್ರ ಉದ್ಘಾಟಿಸಲಾಗುವುದು ಎಂದು ಧಾರವಾಡ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ ವಿ.ಶ್ರೀಶಾನಂದ ಹೇಳಿದರು.

ತಹಸಿಲ್ ಕಚೇರಿ ಹಿಂಭಾಗದಲ್ಲಿ ಆರಂಭವಾಗಲಿರುವ ಸಿವಿಲ್ ನ್ಯಾಯಾಲಯ ಕಟ್ಟಡ ಕಾಮಗಾರಿಯನ್ನು ಭಾನುವಾರ ವೀಕ್ಷಿಸಿ ಮಾತನಾಡಿದ ಅವರು, ನ್ಯಾಯಾಲಯ ಸ್ಥಾಪನೆ ಕುಕನೂರಿನ ಜನ ಹಾಗೂ ವಕೀಲರ ಬಹುದಿನದ ಬೇಡಿಕೆಯಾಗಿದ್ದು, ಅದರಂತೆ ಹಳೆಯ ಕಟ್ಟಡವನ್ನು ನವೀಕರಣ ಮಾಡಲಾಗಿದೆ ಎಂದರು.

ಇನ್ನುಳಿದ ಮೂಲ ಸೌಲಭ್ಯಗಳನ್ನು ಕೂಡಲೇ ಕಲ್ಪಿಸಲು ನಿರ್ದೇಶನ ನೀಡುತ್ತೇನೆ. ತಾಲೂಕಿನಲ್ಲಿ ನ್ಯಾಯಾಲಯಕ್ಕೆ ಸ್ವಂತ ಕಟ್ಟಡ ಪ್ರಾರಂಭಿಸುವ ಕೆಲಸವಾಗಬೇಕು. ಆನಂತರ ಪ್ರತಿನಿತ್ಯ ಕೋರ್ಟ್ ಕಲಾಪಗಳು ನಡೆಸಲು ಚಿಂತನೆ ನಡೆಸಲಾಗುವುದು ಎಂದರು.

ಪಟ್ಟಣದ ಐತಿಹಾಸಿ, ಪುರಾತನ ಶ್ರೀಮಹಾಮಾಯ ದೇವಿದರ್ಶನ ಪಡೆದರು. ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಹನಮಂತಪ್ಪ, ಯಲಬುರ್ಗಾದ ಜೆಎಂಎಫ್‌ಸಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯಕುಮಾರ ಕನ್ನೂರ, ಯಲಬುರ್ಗಾ ಜೆಎಂಎಫ್‌ಸಿ ನ್ಯಾಯಾಧೀಶೆ ಆಯಷಾಬಿ ಮಜೀದ್, ಎಸಿ ಮಹೇಶ ಮಾಲಗಿತ್ತಿ, ತಹಸೀಲ್ದಾರ್ ನೀಲಪ್ರಭಾ, ಯಲಬುರ್ಗಾ ತಾಲೂಕು ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಬೇಲೇರಿ, ಕುಕನೂರು ತಾಲೂಕು ವಕೀಲರ ಸಮಿತಿ ಅಧ್ಯಕ್ಷ ರಾಜಶೇಖರ ಹಳ್ಳಿ, ಉಪಾಧ್ಯಕ್ಷ ಆರ್.ಎಚ್.ಪೂಜಾರ್, ಕಾರ್ಯದರ್ಶಿ ಬಸವರಾಜ ಜಂಗ್ಲಿ, ವಕೀಲರಾದ ಜಗದೀಶ ತೊಂಡಿಹಾಳ, ವಿನಾಯಕ ಬಳಗೇರಿ, ಪುಷ್ಪದಯ್ಯ ಹಿರೇಮಠ, ಆರ್.ಜಿ.ಕುಷ್ಟಗಿ, ಎಸ್.ಜಿ.ಅಂಗಡಿ, ರಮೇಶ ಗಜಕೋಶ, ಅಡಿವೆಪ್ಪ ಬೊರಣ್ಣವರ್, ರಫಿ ಬಳಗೇರಿ, ಪಪಂ ನೌಕರ ರಮೇಶ ಅಕ್ಕಿ, ಕಂದಾಯ ನೀರಿಕ್ಷಕ ರಂಗನಾಥ ಇತರರಿದ್ದರು.