ಬೆಳಗಾವಿ:ವಿಶ್ವಕರ್ಮ ಯೋಜನೆಯಡಿ ಬರುವ ಎಲ್ಲ ಸೌಲಭ್ಯಗಳನ್ನು ಪಡೆದು ಉದ್ಯೋಗಸ್ಥರಾಗುವುದರ ಜೊತೆಗೆ ಇತರರಿಗೂ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಅವಕಾಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಲ್ಪಿಸಿದ್ದಾರೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಗಮದ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಾಹಂಡಳ ನಿಗಮ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಬೆಂಗಳೂರು, ಕರ್ನಾಟಕ ಇನ್ ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೆಜ್ಮೆಂಟ್, ಹಾಗೂ ಬೆಳಗಾವಿ ಜಿಲ್ಲಾ ಸಹಕಾರಿ ಯೂನಿಯನ್ ನಿಗಮ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ತರಬೇತಿ ಸಂಸ್ಥೆಯ ಕಟ್ಟಡ ಕಾಂಪೌಂಡ್ವ ನಿರ್ಮಿಸುವ ಭೂಮಿ ಪೂಜೆ ಹಾಗೂ ವಿಶ್ವಕರ್ಮ ಯೋಜನೆ ಯಡಿ ವಿವಿಧ ತರಬೇತಿಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರಕಾರ ಬೆಳಗಾವಿಯಲ್ಲಿ ಸಹಕಾರ ಅಭಿವೃದ್ಧ ಕೇಂದ್ರ ಪ್ರಾರಂಭಿಸಬೇಕೆಂದು ನಂಜುಂಡಪ್ಪ ವರದಿಯಲ್ಲಿ ಉಲ್ಲೇಖವಾಗಿತ್ತು.ಹೀಗಾಗಿ ಈ ಈ ಕುರಿತು ಹಲವು ಬಾರಿ ಸರಕಾರಕ್ಕೆ ಮನವಿ ಮಾಡಿದ್ದೆ ಆದರೆ ಇದಕ್ಕೆ ಯಾರು ಗಮನಹರಿಸದಿದ್ದಾಗ ಸಹಕಾರ ಮಹಾಮಂಡಳ ವತಿಯಿಂದ ನಾವು ಏನಾದರೂ ಈ ಭಾಗದ ಜನರಿಗೆ ನೆರವಾಗಬೇಕೆಂದು ಈ ತರಬೇತಿ ಕೇಂದ್ರ ಪ್ರಾರಂಭಿಸಿದ್ದೇವೆ ಎಂದರು.
ರಾಜ್ಯದಲ್ಲಿ ಯಾವ ಜಿಲ್ಲೆಗಳಲ್ಲಿ ಇಲ್ಲದೆ ಇರುವಂತಹ ಸುಸಜ್ಜಿತ ಕಟ್ಟಡ ಗುಣಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿದ್ದು ತರಬೇತಿ ಅವಧಿಯಲ್ಲಿ ಅಗತ್ಯ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಉದ್ಯೋಗಾವಕಾಶವನ್ನು ಕಲ್ಪಿಸಿ ಕೊಡುವುದರ ಮೂಲಕ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು.
ಸಹಕಾರಿ ಕ್ಷೇತ್ರದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದವರಿದ್ದಾರೆ. ಅವರಿಗೆ ಸಿಗಬೇಕಾದ ಮಾನ್ಯತೆ ಸಿಗುತ್ತಿಲ್ಲ.ಹೀಗಾಗಿ ಅವರಿಗೆ ಮಾನ್ಯತೆ ಸಿಗುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ.ಅದನ್ನು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಭಾಗದಲ್ಲಿ ಸಹಕಾರ ಕ್ಷೇತ್ರಕ್ಕೆ ಸಿದ್ದನಗೌಡ ರಾಮನಗೌಡ ಪಾಟೀಲ್ ಅವರು ಹೆಚ್ಚಿನ ಒತ್ತು ನೀಡಿದ್ದಾರೆ. ಅವರಿಂದ ಈ ಬೆಳಣೆಗೆ ನಾಂದಿ ಹಾಡಿದವರು. ಇದು ಇವತ್ತು ಬೆಳದು ಬಂದಿದೆ ಬಡವರದು ಸಹಕಾರಿಗಳಿಗೆ ಇಲ್ಲ ಆರ್ಥಿಲ ಸಹಾಯ ನೀಡಿಲ್ಲ.
ವಿಧಾನ ಪರಿಷತ್ ನ ಮಾಜಿ ಸದಸ್ಯ ಮಾಂತೇಶ ಕವಟಗಿಮಠ ಮಾತನಾಡಿ ಬೆಳಗಾವಿ ಜಿಲ್ಲೆಗೂ ಹಾಗೂ ಸಹಕಾರಿ ಕ್ಷೇತ್ರಕ್ಕೂ ಅಭಿನವಭಾವ ಸಂಬಂಧವಿದೆ. ಕರ್ನಾಟಕ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಗೆ ಸಹಕಾರಿ ಕ್ಷೇತ್ರದಲ್ಲಿ ಅಗ್ರ ಸ್ಥಾನವಿದೆ ಎಂದ ಅವರು ಸಹಕಾರಿ ಕ್ಷೇತ್ರದ ವಿವಿಧ ಚಟುವಟಿಕೆಗಳಿಗಾಗಿ ಅವತ್ತಿನ ಕಾಲದಲ್ಲಿ 38 ಗುಂಟೆ ನಿವೇಶನ ಕೊಡುವುದರ ಜೊತೆಗೆ ಅನುದಾನ ಕೊಟ್ಟು ಸೊಸಜಿತ ಕಟ್ಟಡ ನಿರ್ಮಾಣವಾಗಲಿಕ್ಕೆ ಜಿ.ಟಿ ದೇವೇಗೌಡರ ಕೊಡುಗೆ ಅಪಾರವಾಗಿ ಎಂದು ಹೇಳಿದರು.
ಕಾಯಕವೇ ಕೈಲಾಸ ಎಂಬಂತೆ ಕಾಯಕ ಆಧಾರಿತ ಸಮುದಾಯಗಳಿಗೆ ಶಕ್ತಿ ತುಂಬುವಂತಹ ಕೆಲಸ
12ನೇ ಶತಮಾನದಲ್ಲಿಯೇ ಬಸವಣ್ಣನವರ ಮಾಡಿದ್ದರು. ಅದರಂತೆ ಈಗ 21ನೇ ಶತಮಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಯಕ ಆಧಾರಿತ ಸಮಾಜಗಳಿಗೆ ಧ್ವನಿ ಹಾಗೂ ಶಕ್ತಿ ತುಂಬುವಂತಹ ಕೆಲಸ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ ಎಂದು ಹೇಳಿದರು.
ಇತ್ತೀಚಿಗೆ ವ್ಯಾಪಾರ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ನೋಡುತ್ತಿದ್ದೇವೆ. ಕೇವಲ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕುಂಬಾರಿಕೆ, ಕಮ್ಮಾರಿಕೆ, ಬಡಿಗತನ ಉಳಿದಿರುವಂತದ್ದು, ಅದು ನಶಿಸಿ ಹೋಗಬಾರದು ಜೊತಗೆ ಗ್ರಾಮೀಣ ಪ್ರದೇಶದಲ್ಲಿರುವ ಬಡ ಕುಟುಂಬಗಳಿಗೆ ಹಾಗೂ ಕಾಯಕ ಆಧಾರಿತ ಸಮಾಜಗಳಿಗೆ ಮತ್ತೊಮ್ಮೆ ಮರು ಜೀವ ತುಂಬುವಂತಹ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ.ಇದರ ಸದುಪಯೋಗ ಎಲ್ಲ ಸಮಾಜ ವರ್ಗದವರಿಗೆ ಯಾಗಲಿ ಎಂದು ಶುಭ ಹಾರೈಸಿದರು.
ಮಾಜಿ ಶಾಸಕ ಮಾಹಂತೇಶ ಬಿ. ದೊಡ್ಡ ಗೌಡ್ರ ಮತನಾಡಿ
ಸಿದ್ದನಗೌಡ ಪಾಟೀಲ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಹಾಗೂ ಅವರ ಕನಸಿನಂತೆ
ಸೊಸೈಟಿ, ಕ್ರೆಡಿಟ್ ಬ್ಯಾಂಕ್, ಸಕ್ಕರೆ ಕಾರ್ಖಾನೆ ಸೇರಿದಂತೆ ವಿವಿಧ ಸಹಕಾರಿ ಸಂಸ್ಥೆಗಳು ಹಳ್ಳಿ ಹಳ್ಳಿಗಳಿಗೆ ತಲುಪೂವ ಮೂಲಕ ಬಡವರ ಏಳಿಗೆಗಾಗಿ ಶ್ರಮಿಸುತ್ತಿವೆ ಎಂದರು.
ಪ್ರಧಾನ ಮಂತ್ರಿಗಳ ಕನಸಿನಂತೆಯೂ ಪ್ರತಿ ಮನೆ ಮನೆಯಲ್ಲಿ ಗುಡಿ ಕೈಗಾರಿಕೆ ಮಾಡಬೇಕು. ವಿಶ್ವಕರ್ಮ ಯೋಜನೆಯಡಿ ಪ್ರತಿ ಸದಸ್ಯರು ತರಬೇತಿ ಪಡೆಯುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಸ್ವಾವಲಂಬಿ ಜೀವನ ನಡೆಸಲು ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಎಲ್ಲರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಪ್ರಸ್ತಾವಿಕವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಗಮದ ಉಪಾಧ್ಯಕ್ಷ ಜಗದೀಶ ಕವಟಗಿಮಠ ಮಾತನಾಡಿ, ನಮ್ಮ ದೇಶದ ಸಂಪ್ರದಾಯ, ಸಂಸ್ಕೃತಿಯನ್ನು ಸಾರುವ ಕಲಾವಿದರು, ಕುಶಲಕರ್ಮಿಗಳು, ಹಾಗೂ ಸಣ್ಣ ವ್ಯಾಪಾರಿಗಳಿಗೆ ವಿಶ್ವಕರ್ಮ ಯೋಜನೆಯಡಿ ಬಂಡವಾಳ ನೀಡುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿಗೊಳಿಸುವುದು ಹಾಗೂ ಕರಕುಶಲ ಕಲೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಮುಂದಿಳಿಗೆಗಾಗಿ ಕಾಪಾಡಿಕೊಂಡುಹೋಗವ ಅಗತ್ಯತೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಣ್ಯರು ವಿಶ್ವಕರ್ಮ ತರಬೇತಿ ಕೈಪಡಿ
ಹಾಗೂ ದೂರ ಶಿಕ್ಷಣ ತರಬೇತಿ ಪಠ್ಯ ಪುಸ್ತಕ ಕಿಟ್ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಲಪ್ಪ ಜಗ್ಗಿನವರ, ಕರ್ನಾಟಕ ರಾಜ್ಯ ಸರ್ಕಾರ ಮಂಡಳಿಯ ಎಲ್ಲ ನಿರ್ದೇಶಕರು, ಬೆಳಗಾವಿ ಜಿಲ್ಲಾ ಸಹಕಾರಿ ಯೂನಿಯನ್ ನ ನಿರ್ದೇಶಕರು ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರ್ಥನೆ ಸುಷ್ಮಾ ಕಲ್ಲೇಕರ್, ನಿರೂಪಣೆ ವಸಂತ ಗೀತಾ. ವಂದನಾರ್ಪಣೆ ಹಾಲಪ್ಪಾ ಜಗ್ಗಿನವರ್