ಜಿಲ್ಲೆ

ಜೆಟಿ ಮಹಾವಿದ್ಯಾಲಯದ ಎನ್​ಸಿಸಿ ಟಕಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ.

Gadag - Shivanand Hiremath

ಗದಗ: ನಗರದ ಪ್ರತಿಷ್ಠಿತ ಕೆಎಲ್​ಇ ಸಂಸ್ಥೆಯ ಜೆಟಿ ಮಹಾವಿದ್ಯಾಲಯದ ಎನ್​ಸಿಸಿ ಟಕವು ವಾಷಿರ್ಕ ತರಬೇತಿ ಶಿಬಿರದಲ್ಲಿ ಸಮಗ್ರ ವೀರಾಗ್ರಹಣ ಪ್ರಶಸ್ತಿ ಪಡೆದುಕೊಂಡಿದೆ ಎಂದು ಕೆಎಲ್​ಇ ಸಂಸ್ಥೆ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಸ್ಥೆಯು, ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಜೆಎನ್​ವಿ ನವೋದಯ ಶಾಲೆಯಲ್ಲಿ ಇತ್ತೀಚೆಗೆ ಜರುಗಿದ 10 ದಿನದ ತರಬೇತಿ ಶಿಬಿರದಲ್ಲಿ 600 ಕೆಡೆಟ್​ ಗಳು ಹಾಗೂ 20 ವಿವಿಧ ಶಾಲಾ ಕಾಲೇಜುಗಳು ಭಾಗವಹಿಸಿದ್ದವು. ಈ ತರಬೇತಿ ಶಿಬಿರದಲ್ಲಿ ಕೆಡೆಟ್​ ಗಳಿಗೆ ವಿವಿಧ ತರಬೇತಿಯೊಂದಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು . ಅದರಲ್ಲಿ ಮಹಾವಿದ್ಯಾಲಯವು ಡ್ರಿಲ್​ ವಿಭಾಗದಲ್ಲಿ ಪ್ರಥಮ ಸ್ಥಾನ, ಸಾಂಸತಿಕ ನೃತ್ಯದಲ್ಲಿ ಪ್ರಥಮ ಸ್ಥಾನ, ಥ್ರೋ ಬಾಲ್​ ತೃತೀಯ, ಕೋ ಕೋ ತೃತೀಯ, ಹಗ್ಗ ಜಗ್ಗಾಟ ತೃತೀಯ ಸ್ಥಾನ ಪಡೆದುಕೊಂಡು ಒಟ್ಟಾರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗಳಿಸಿಕೊಂದೆ. ಅತ್ಯುತ್ತಮ ಕಾಲೇಜು ಎಂಬ ಹೆಗ್ಗಳಿಕೆಯೊಂದಿಗೆ ಸಮಗ್ರ ವೀರಗ್ರಾಣಿ ಪ್ರಶ್ತಿ ಪಡೆದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.