ಸಾಂಪ್ರದಾಯಿಕ ಸಸ್ಯಗಳ ಔಷಧಿಗೆ ವಿಶ್ವ ಮಹತ್ವ: ಜಗದೀಶ ವಿಷ್ಣು ದಳವಿ
ವಿಜಯವಾಣಿ ಸುದ್ದಿಜಾಲ ಗದಗ
ವಿಜ್ಞಾನ ಹಾಗೂ ಕೃತಕ ಬುದ್ದಿಮತ್ತೆಯ ಬಳಕೆ ಮತ್ತು ತಿಳುವಳಿಕೆ ಇಲ್ಲದ ಸಮಾಜ ಅಭಿವೃದ್ದಿಯನ್ನು ಹೊಂದಲಾರದು. ವಿಜ್ಞಾನವಿಲ್ಲದ ಸಮಾಜ ನಿಷಯೋಜಕ, ವಿಜ್ಞಾನದ ಅನ್ವಯದಿಂದ ಅಭಿವೃದ್ದಿ ಹೊಂದಿದ ಸಮಾಜವನ್ನು ನಿಮಿರ್ಸಲು ಸಾಧ್ಯವಾಗುತ್ತದೆ ಎಂದು ಭಾರತ ಸರ್ಕಾರದ ಸಸ್ಯಗಳ ಸರ್ವೇಣಾಲಯದ ವಿಜ್ಞಾನಿ ಡಾ. ಜಗದೀಶ ವಿಷ್ಣು ದಳವಿ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಜೆ.ಟಿ. ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದಿಂದ ಶನಿವಾರ ಆಯೋಜಿಸಿದ್ದ ಔಷಧೀಯ ಸಸ್ಯಗಳ ಸಾಂಪ್ರದಾಯಿಕ ಬಳಕೆಯ ಇತ್ತೀಚಿನ ಪ್ರವೃತ್ತಿಗಳು ಎಂಬ ವಿಷಯದ ಮೇಲೆ ರಾಜ್ಯ ಮಟ್ಟದ ವಿದ್ಯಾಥಿರ್ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಂಪ್ರದಾಯಿಕ ಔಷಧಿ ಗುಣಗಳನ್ನು ಹೊಂದಿದ ಆಯುರ್ವೇದ ಮತ್ತು ಸಿದ್ಧ ಔಷಧೀಯ ಸಸ್ಯಗಳ ಸಂಶೋಧನೆ ಮತ್ತು ಪ್ರಯೋಜನಗಳು, ಔಷದೀಯ ಸಸ್ಯಗಳ ಗುರುತಿಸುವಿಕೆಯ ವಿಧಾನ, ಅವುಗಳ ಸಂರಣೆ ಕುರಿತು ವಿವರಿಸಿದರು. ಈ ಸಸ್ಯಗಳಿಂದ ಸಿದ್ದಪಡಿಸಿದ ಔಷಧಿಗಳನ್ನು ಬಳಸುವುದರಿಂದ ಯಾವ ಅಡ್ಡ ಪರಿಣಾಮಗಳು ಉಂಟಾಗದೆ ಇರುವ ಕಾರಣಗಳಿಂದ ಇತ್ತೀಚಿನ ದಿನಮಾನಗಳಲ್ಲಿ ಪ್ರಪಂಚದಾದ್ಯಂತ ಸಾಂಪ್ರದಾಯಿಕ ಸಸ್ಯಗಳ ಔಷಧಿ ಮಹತ್ವ ಪಡೆದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಜನರಲ್ಲಿ ಜಾಗೃತಿ ಉಂಟುಮಾಡಲು ಮೇಳಗಳನ್ನು ಆಯೋಜಿಸುತ್ತಿದೆ. ಗದಗ ಜಿಲ್ಲೆ ಒಂದರಲ್ಲೇ ಸುಮಾರು 850ಕ್ಕೂ ಹೆಚ್ಚು ಸಸ್ಯ ವರ್ಗಗಳನ್ನು ಗುರುತಿಸಲಾಗಿದೆ. ಹೀಗಾಗಿ ಇಂಥ ವಿಚಾರ ಸಂಕಿರಣಗಳನ್ನು ಆಯೋಜಿಸುವದರಿಂದ ವಿದ್ಯಾಥಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಅಧ್ಯತೆ ವಹಿಸಿದ್ದ ಪ್ರಾಚಾರ್ಯ ಪಿ. ಜಿ. ಪಾಟೀಲ ಮಾತನಾಡಿ, ಸಸ್ಯಗಳ ಜೀವನ ಕ್ರಮ ಹಾಗೂ ಅವುಗಳ ಉಪಯೋಗದ ಮಹತ್ವ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಔಷಧೀಯ ಸಸ್ಯಗಳ ಸಂರಣೆ, ಸಂಶೋಧನೆ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಒಟ್ಟು 36 ವಿದ್ಯಾಥಿರ್ಗಳು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ರಾಜ್ಯದ ವಿವಿಧ ಮಹಾವಿದ್ಯಾಲಯಗಳಿಂದ ಒಟ್ಟು 118 ವಿದ್ಯಾಥಿರ್ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗದಗನ ಜೆ.ಟಿ. ಕಾಲೇಜಿನ ಶಿವಾನಿ ಹಿರೇಗೌಡರ, ಹಾವೇರಿಯ ಜಿ. ಎಚ್. ಕಾಲೇಜಿನ ಐಶ್ವರ್ಯ ಜಿ. ಸಿ. ಬೆಳಗಾವಿಯ ಆರ್.ಎಲ್.ಎಸ್. ಕಾಲೇಜಿನ ತೇಜಸ್ವಿನಿ ಕ್ರಮವಾಗಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನಪಡೆದರು. ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು.
ವಿಚಾರ ಸಂಕಿರಣದ ಸಂಯೋಜಕ ಪ್ರೊ. ಎಚ್. ಎಸ್. ಕೌಲಗಿಯ ಮಾತನಾಡಿ ಕಾರ್ಯಕ್ರಮದ ಧ್ಯೋಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಡಿಜಿಎಂ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಕುಮಾರ, ಹುಬ್ಬಳ್ಳಿಯ ಪಿ.ಸಿ.ಜಾಬಿನ್ ಮಹಾವಿದ್ಯಾಲಯದ ಡಾ. ಎಲ್.ಸಿ. ಕುಲಕಣಿರ್, ಬಾಗಲಕೋಟೆಯ ಬಸವೇಶ್ವರ ಮಹಾವಿದ್ಯಾಲಯದ ಸಸ್ಯಶಾಸ್ತ್ರ ಸ್ನಾತಕೋತ್ತರ ಕೇಂದ್ರದ ಸಂಚಾಲಕ ಡಾ. ಅವಿತಾ ಎಂ., ಪ್ರೊ. ಪಲ್ಲೇದ, ಎಸ್ಬಿಜಿಎಚ್ ಕಾಲೇಜಿನ ಡಾ. ಇ. ಬಿ. ಸೇಡಂಕರ, ಡಾ. ಜಿ. ಕೆ. ರಮೇಶ, ಡಾ. ಕೃಷ್ಣ ವಡ್ಡರ, ರಮ್ಯಾ ಕಲ್ಲೋಳಿಕರ ಇತರರು ಇದ್ದರು.