ಜಿಲ್ಲೆ

ಜೆ.ಟಿ.ಮಹಾವಿದ್ಯಾಲಯದಲ್ಲಿ ಶಿರಸಂಗಿ ಲಿಂಗರಾಜರ ಜಯಂತಿಯ ಅಂಗವಾಗಿ ರಕ್ತದಾನ ಶಿಬಿರ.

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ನಗರದ ಕೆಎಲ್​ಇ ಸಂಸ್ಥೆಯ ಜೆ. ಟಿ. ಮಹಾವಿದ್ಯಾಲಯದಲ್ಲಿ ಸೊಮವಾರ ಶಿರಸಂಗಿ ಲಿಂಗರಾಜ ಜಯಂತಿ ಪ್ರಯುಕ್ತ ಬೃತ್​ ಹತ್​ ರಕ್ತದಾನ ಶಿಬಿರ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯ ಎಸ್​. ಪಿ. ಸಂಶಿಮಠ, ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದೆ. ರಕ್ತದಾನ ಮಾಡಿ ಜೀವ ಉಳಿಸುವ ತ್ಯಾಗಕ್ಕೆ ಮುಂದಾಗಬೇಕು ಎಂದರು. 124ಕ್ಕೂ ಹೆಚ್ಚು ವಿದ್ಯಾಥಿರ್ಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಉಚಿತವಾಗಿ ರಕ್ತದ ಗುಂಪುಗಳನ್ನು ತಪಾಸಣೆ ಮಾಡಲಾಯಿತು. ಒಟ್ಟು 30 ವಿದ್ಯಾಥಿರ್ಗಳು ಹಾಗೂ ಸಿಬ್ಬಂದಿ ವರ್ಗ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

ಪ್ರೊ. ಪಿ. ಜಿ. ಪಾಟೀಲ್​, ಡಾ. ನಾಗರಾಜ ಓಬಯ್ಯ, ಪ್ರೊ. ಜಗನ್ನಾಥ, ಡಾ. ನಾಗರಾಜ ಬಳಿಗೇರ, ಜಗದೀಶ ನಾಯಕ, ಪವಾಡ ಶೆಟ್ಟ್ಟ, ಎಸ್​. ಬಿ. ಹಾವೇರಿ ಹಲವರು ಇದ್ದರು.