ಜಿಲ್ಲೆ

ಜೆ. ಟಿ. ಮಹಾವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಕಾರ್ಯಾಗಾರ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಸರ್ಕಾರ ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ವಿಜ್ಞಾನ&ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಪ್ರಾಮುಖ್ಯತೆಯನ್ನು ನೀಡುವುದರ ಕಡೆ ಹೆಚ್ಚು ಪ್ರಾಶಸ ನೀಡುತ್ತಿದೆ. ಭವಿಷ್ಯದಲ್ಲಿ ದಿನಗಳಲ್ಲಿ ವಿಜ್ಞಾನದ ಬೆಳವಣಿಗೆಗೆ ಸಹಕಾರಿ ಆಗಿದೆ ಎಂದು ಡಾ.ಎಂ.ಬಿ.ಹಿರೇಮಠ ಹೇಳಿದರು.

ಜೆ. ಟಿ. ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಶನಿವಾರ ಜೀವ ವಿಜ್ಞಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು ವಿಷಯದ ಮೇಲೆ ಏರ್ಪಡಿಸಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನದ ತಿಳುವಳಿಕೆಯ ಜೊತೆಗೆ ನಮ್ಮ ದೇಶದ ಯುವ ಜನಾಂಗ ಸಂಶೋಧನೆಯಲ್ಲಿ ತೊಡಗಿಸಿಕೊಂಡರೆ ಹೆಚ್ಚು ಪ್ರಯೋಜನ ಆಗುತ್ತದೆ ಎಂದರು.

ಬಯೋಟೆಕ್ನಾಲಜಿ ಇತಿಹಾಸ ಮತ್ತು ಅದು ವಿಲಗೊಂಡದ್ದನ್ನು ವಿವರಿಸಿದ ಹಿರೇಮಠ ಅವರು, ಜನೆಟಿಕ್​ ಡಿಸೀಜ್​, ಸಕ್ಕರೆ ಕಾಯಿಲೆಗೆ ಬಳಸುವ ಇನ್ಸುಲಿನ್​, ಐ. ವಿ. ಎ್​ ತಂತ್ರಜ್ಞಾನದ ಮೂಲಕ ಬಂಜೆತನವನ್ನು ಹೋಗಲಾಡಿಸಲು ಬಯೋ ಟೆಕ್ನಾಲಜಿ ತುಂಬಾ ಪ್ರಯೋಜನಕಾರಿ ಆಗಿದೆ ಎಂದರು ಹೇಳಿದರು.

ಡಾ. ಶ್ರೀಧರ ಘಾಗ್ನೆ ಮಾತನಾಡಿ, ಕೋರಾನಾ ಸಂದರ್ಭದಲ್ಲಿ ಕೋ&ವ್ಯಾಕ್ಸಿನ್​ ತಯಾರಿಸಲು ಎಂ.ಆರ್​.ಎನ್​.ಎ ತಂತ್ರಜ್ಞಾನವನ್ನು ಬಳಸಲಾಗಿದೆ ಎಂದರು. ಜೈವಿಕ ಸಂಶ್ಲೇಷಣೆ ಕುರಿತು ವಿವರಿಸಿದರು.

ಪ್ರಾಚಾರ್ಯ ಪಿ. ಜಿ. ಪಾಟೀಲ, ಡಾ. ಕೆ.ಹೆಚ್​. ವಡ್ಡರ್​, ಆರ್​. ಎಸ್​. ಕಲ್ಲೋಳಿಕರ, ರಾಜಕುಮಾರ ಬಡಿಗೇರ, ಡಾ. ಜಿ. ಕೆ. ರಮೇಶ, ಡಾ. ರು, ಡಾ. ಕರ್ಣಕುಮಾರ, ಪವಿತ್ರ ರಗಟಿ, ಶಿವಾನಿ ಹಿರೇಗೌಡರ ಇತರರು ಇದ್ದರು.