ಜಿಲ್ಲೆ

JSW PORT ಕಾರವಾರ, ಅಂಕೋಲಾ 2 ಕಡೆ ಭಾರಿ ಪ್ರತಿಭಟನೆ

Uttara Kannada - Subash Hegde

ಕಾರವಾರ/ಅಂಕೋಲಾ JSW STRIKE : ಬಾವಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಣಿಯಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಗ್ರಾಮಸ್ಥರು, ಮೀನುಗಾರರು ಶುಕ್ರವಾರ ತೀವ್ರ ಪ್ರತಿಭಟನೆ ನಡೆಸಿದರು. ಕೇಣಿ ಗ್ರಾಮದಿಂದ ಕಾಲ್ನಡಿಗೆಯಲ್ಲಿ ಹೊರಟ ಸಾವಿರಾರು ಗ್ರಾಮಸ್ಥರು ಅಂಕೋಲಾ ತಹಸೀಲ್ದಾರ್ ಕಚೇರಿಯವರೆಗೆ ಆಗಮಿಸಿ ತಹಸೀಲ್ದಾರ್ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು. ವಾಣಿಜ್ಯ ಬಂದರು ನಿರ್ಮಾಣ ವಿರೋದಿಸಿ ಘೋಷಣೆ ಕೂಗಿದರು. ನಂತರ ಕಾರವಾರಕ್ಕೆ ಆಗಮಿಸಿದ ನೂರಾರು ಪ್ರತಿಭಟನಾಕಾರರು ಜಿಲ್ಲಾಽಕಾರಿ ಕಚೇರಿಯ ಎದುರು ಪ್ರತಿಭಟನಾ ಸಭೆ ನಡೆಸಿ, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.

  ಕಾರವಾರದಲ್ಲಿ JSW PORT STRIKE

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮೀನುಗಾರರ ಮುಖಂಡ ಶ್ರೀಕಾಂತ ದುರ್ಗೇಕರ್, ಸ್ಥಳೀಯರಿಗೆ ಮಾಹಿತಿಯನ್ನೇ ನೀಡದೇ ಕೇಣಿಯಲ್ಲಿJSW PORT ಖಾಸಗಿ ಬಂದರು ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಜೆಎಸ್‌ಡಬ್ಲು ಕಂಪನಿ ಈಗಾಗಲೇ ಸರ್ವೇ ಕಾರ್ಯ ಆರಂಭಿಸಿದೆ. ಕೇಣಿಯಲ್ಲಿ ಬಂದರು ನಿರ್ಮಾಣ ಮಾಡಿದರೆ, ಸ್ಥಳೀಯ ಮೀನುಗಾರಿಗೆ ಸಂಪೂರ್ಣ ನಾಶವಾಗಲಿದೆ. ಗೂಂಡಾ ಪ್ರವೃತ್ತಿ ಬೆಳೆಯಲಿದೆ. ಇದರಿಂದ ನಮ್ಮ ಊರಿಗೆ ವಾಣಿಜ್ಯ ಬಂದರು ಬೇಡ ಎಂದರು.

ಸೀಬರ್ಡ್ ನೌಕಾ ಯೋಜನೆ ಬರುವಾಗಲೂ ಸ್ಥಳೀಯರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಕಳೆದುಕೊಂಡ ಭೂಮಿಗೆ ತಕ್ಷಣ ಪರಿಹಾರ ನೀಡುತ್ತೇವೆ ಎಂದಿದ್ದರು. ಯೋಜನೆ ಜಾರಿಯಾಗಿ 30 ವರ್ಷವಾಗುತ್ತ ಬಂದಿದೆ. ಇದುವರೆಗೂ ಎಲ್ಲ ಕುಟುಂಬಗಳಿಗೆ ಪರಿಹಾರ ಬಂದಿಲ್ಲ. ನೌಕಾನೆಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ ದೊರಕಿಲ್ಲ. ಮೇಲಿಂದ ನೆರೆಯಂತ ಸಮಸ್ಯೆಗಳು ಸೃಷ್ಟಿಯಾಗಿವೆ. ಈಗಲೂ ಯೋಜನೆಯಿಂದ ಸ್ಥಳೀಯರಿಗೆ JSW PORT ನಿಂದ  ಯಾವುದೇ ತೊಂದರೆ ಇಲ್ಲ ಎಂದು ಭರವಸೆ ನೀಡುತ್ತಾರೆ. ಆದರೆ, ನಂತರ ಸ್ಥಳೀಯರನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂದು ದೂರಿದರು.

ಗ್ರಾಮ ಪಂಚಾಯಿತಿ ಸದಸ್ಯ ಉದಯ ನಾಯಕ ಮಾತನಾಡಿ, ವಿಮಾನ ನಿಲ್ದಾಣಕ್ಕಾಗಿ ಅರ್ಧ ಬಾವಿಕೇರಿ ಗ್ರಾಮ ನಾಶವಾಗಲಿದೆ. ಬಾವಿಕೇರಿಯಲ್ಲಿ ಯಾರೂ ವಿಮಾನದಲ್ಲಿ ಓಡಾಡುವ ಶ್ರೀಮಂತರಿಲ್ಲ. ಬಡವರ ಜಮೀನನ್ನು ಪಡೆದು, ಸರ್ಕಾರ ವಿಮಾನ ನಿಲ್ದಾಣ ಮಾಡಲು ಹೊರಟಿದೆ. ಇತ್ತ, ಈಗ JSW PORT ಬಂದರು ನಿರ್ಮಾಣ ಮಾಡಿ ಮೀನುಗಾರನ್ನೂ ತೊಂದರೆಗೀಡು ಮಾಡಲು ಹೊರಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೀನುಗಾರರ ಮುಖಂಡ ಹೂವಾ ಖಂಡೇಕರ್ ಮಾತನಾಡಿ, ಜಿಲ್ಲೆಯಲ್ಲಿ ಅದರಲ್ಲೂ ಕಾರವಾರ, ಅಂಕೋಲಾದಲ್ಲಿ ವಿವಿಧ ಯೋಜನೆಗಳ ಕಾರಣದಿಂದ ಜನರು ತಮ್ಮ ನೆಲೆಯನ್ನು ಕಂಡುಕೊAಡಿದ್ದಾರೆ. ಪಾರಂಪರಿಕ ವೃತ್ತಿಗಳಿಂದ ದೂರವಾಗಿ ಉದ್ಯೋಗವಿಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ ಇದು ಸರಿಯಲ್ಲ ಎಂದರು.

ಬಾವಿಕೇರಿ ಗ್ರಾಪಂ ಅಧ್ಯಕ್ಷೆ ದೀಪಾ ನಾಯಕ, ಪ್ರಮುಖರಾದ ಗಣಪತಿ ಮಾಂಗ್ರೆ, ಚಂದ್ರಕಾAತ ಬಲೆಗಾರ್, ಶಂಕರ ಬಲೆಗಾರ್, ರಾಜೇಶ್ವರಿ ಕೇಣಿಕರ್, ಸ್ಮಿತಾ ಹರಿಕಂತ್ರ, ಸರಿತಾ ಬಲೆಗಾರ್, ತೋಕು ಹರಿಕಂತ್ರ, ವಾಮನ ನಾಯಕ, ಸಂಜೀವ ಬಲೆಗಾರ್, ಪ್ರಮೋದ ಬಾನಾವಳಿಕರ್, ಗಣಪತಿ ದುರಿ, ರಮೇಶ ಕುರ್ಲೆ, ಚಂದ್ರಕಾAತ ಹರಿಕಂತ್ರ, ಡಾ.ವೆಂಕಟೇಶ ಕೇಣಿಕರ್, ನಾಗರಾಜ ಖಾರ್ವಿ, ರಾಜೇಶ್ವರಿ ಕೇಣಿಕರ್ ಇತರರು ಪ್ರತಿಭಟನೆಯಲ್ಲಿದ್ದರು.