ಧಾರವಾಡ: ಹುಬ್ಬಳ್ಳಿ- ಧಾರವಾಡ ಉತ್ತರ ಕರ್ನಾಟಕ ಸಹೋದಯದ ವತಿಯಿಂದ ಹಾವೇರಿಯ ಕೆ.ಎಲ್.ಇ ಶಾಲೆಯಲ್ಲಿ ಇತ್ತೀಚೆಗೆ ಜರುಗಿದ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನಗರದ ವಿದ್ಯಾಗಿರಿ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳು 9 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.
* ಬಾಲಕರ ವಿಭಾಗ: 100 ಮೀ. ಓಟದಲ್ಲಿ ಅಮೋಘಗೌಡ ದೊಡ್ಡಮನಿ ಪ್ರಥಮ ಹಾಗೂ ಉದ್ದಜಿಗಿತದಲ್ಲಿ ಪ್ರಥಮ, 200 ಮೀ. ಓಟದಲ್ಲಿ ತೇಜಸ್ ಕೆ.ಟಿ. ಪ್ರಥಮ, 800 ಮೀ. ಓಟದಲ್ಲಿ ಸತೀಶಗೌಡ ಎನ್. ಪ್ರಥಮ, 400 ಮೀ. ಓಟದಲ್ಲಿ ಯಶವಂತ್ ಕೆ. ದ್ವಿತೀಯ ಸ್ಥಾನ ಪಡೆದಿದ್ದಾನೆ. ಅಮೋಘ ದೊಡ್ಡಮನಿ ಬಾಲಕರ ವಿಭಾಗದಲ್ಲಿ ವೀರಾಗ್ರಣಿ ಪ್ರಶಸ್ತಿಗೆ ಭಾಜನನಾಗಿದ್ದಾನೆ.
* ಬಾಲಕಿಯರ ವಿಭಾಗ: 400 ಮೀ. ಓಟದಲ್ಲಿ ತುಳಸಿ ಕಟ್ಟಿ ದ್ವಿತೀಯ, 800 ಮೀ. ಓಟದಲ್ಲಿ ಗೌರಿ ದೇಸಾಯಿ ತೃತೀಯ, ಉದ್ದಜಿಗಿತದಲ್ಲಿ ಗ್ಲೋರಿಯಾ ಮುರತೋಟಿ ಪ್ರಥಮ, 100. ಮೀ ಓಟದಲ್ಲಿ ಗ್ಲೋರಿಯಾ ಮುರತೋಟಿ ತೃತೀಯ ಸ್ಥಾನ, 200 ಮೀ. ಓಟದಲ್ಲಿ ದ್ವಿತೀಯ, ಗುಂಡುಎಸೆತದಲ್ಲಿ ಶ್ರೇಯಾ ಹಿರೇಮಠ ದ್ವಿತೀಯ ಸ್ಥಾನ ಪಡೆದಿದ್ದಾಳೆ. 4*100 ಮೀ. ಮಿಶ್ರ ರಿಲೇ ಓಟದಲ್ಲಿ ಶ್ರೇಯಾ ಹಿರೇಮಠ, ಯಶವಂತ್ ಕೆ., ಸಾಕಿಬ್ ಹಾಗೂ ಗ್ಲೋರಿಯಾ ಪ್ರಥಮ ಸ್ಥಾನ ಪಡೆದರು. ಗ್ಲೋರಿಯಾ ಮುರತೋಟಿ ಮತ್ತು ಶ್ರೇಯಾ ಹಿರೇಮಠ ಬಾಲಕಿಯರ ವೀರಾಗ್ರಣಿ ಪ್ರಶಸ್ತಿಯನ್ನು ಹಂಚಿಕೊಂಡರು.
ಕ್ರೀಡಾ ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್, ಪ್ರಾಚಾರ್ಯೆ ಸಾಧನಾ ಎಸ್., ಮಹಾವೀರ ಉಪಾಧ್ಯೆ, ದೈಹಿಕ ಶಿಕ್ಷಕರಾದ ಎನ್.ಬಿ. ದೇವರ, ರವಿ ಎಂ., ಶಿವಾನಂದ ಎಸ್., ಗಿರೀಶ ಎಚ್., ಲಕ್ಷ್ಮೀ ಬಿ., ಮೀನಾಕ್ಷಿ ಎಚ್. ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.