ಬೆಳಗಾವಿ: ರಾಷ್ಟçದ ಬಹುತೇಕ ಸಮಸ್ಯೆಗಳಿಗೆ ಶಿಕ್ಷಣವು ಪರಿಹಾರ ಒದಗಿಸುವುದು. ಆದರೆ ಶಿಕ್ಷಣದ ಖಾಸಗೀಕರಣದ ಫಲವಾಗಿ ಎಲ್ಲರಿಗೂ ಶಿಕ್ಷಣ ದೊರೆಯುತ್ತಿಲ್ಲ. ಆದ್ದರಿಂದ ಎಲ್ಲರಿಗೂ ಗುಣಮಟ್ಟದ ಸಮಾನ ಶಿಕ್ಷಣ ದೊರೆಯಬೇಕು ಎಂದು ಜಸ್ಟಿಸ್ ಎಚ್.ಎನ್. ನಾಗಮೋಹನ ದಾಸ್ ಹೇಳಿದರು.
ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಮಂಗಳವಾರ ಜರುಗಿದ ಆರ್‌ಸಿಯು ೧೪ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಿಕ್ಷಣದಲ್ಲಿ ಖಾಸಗಿ ಸಹಭಾಗಿತ್ವ ಉತ್ತಮ ಆದರೆ, ಶಿಕ್ಷಣದ ಖಾಸಗೀಕರಣ ಇದು ಸಮಾಜದಲ್ಲಿ ಬಹು ದೊಡ್ಡ ಅಸಮಾನತೆಯನ್ನು ನಿರ್ಮಿಸಿಸುವ ಮೂಲಕ, ಅನೇಕರನ್ನು ಶಿಕ್ಷಣದಿಂದ ವಂಚಿತ ಮಾಡುವುದು. ಆದ್ದರಿಂದ ಒಂದೆ ಬಗೆಯ ಶಿಕ್ಷಣವು ಎಲ್ಲರಿಗೂ ದೊರೆಯಬೇಕು ಎಂದರು.
ಶಿಕ್ಷಣದಲ್ಲಿ ಇತ್ತೀಚೆಗೆ ಗುಣಮಟ್ಟ ಮತ್ತು ಮಾನವೀಯ ಮೌಲ್ಯಗಳ ಕೊರತೆಯಿದೆ. ಶಿಕ್ಷಣದ ಜೊತೆಗೆ ಸಂಸ್ಕೃತಿ ಮತ್ತು ಸಂಸ್ಕಾರಗಳು ಕೂಡಾ ವಿದ್ಯಾರ್ಥಿಗಳಿಗೆ ದೊರೆಯುವ ಅವಶ್ಯಕತೆಯಿದೆ. ಹೆಚ್ಚಿನ ಅಂಕಗಳು, ಉತ್ತಮ ಲ್ಯಾಬ್, ಸ್ಮಾರ್ಟ್ ಕ್ಲಾಸ್‌ರೂಂ, ಅತ್ಯಾಧುನಿಕ ಉಪಕರಣಗಳು ಈ ಎಲ್ಲವೂ ಶಿಕ್ಷಣದ ಗುಣಮಟ್ಟದ ಅಳೆಯುವ ಮಾಪನಗಳಾಗಿವುದು ಸೋಜಿಗದ ಸಂಗತಿ ಎಂದರು.
ಶಿಕ್ಷಣ ಮತ್ತು ನಿರುದ್ಯೋಗ ದೇಶದ ಪ್ರಮುಖ ಸಮಸ್ಯೆಗಳಾಗಿವೆ. ಕಳೆದ ೪೦ ವರ್ಷಗಳಲ್ಲಿ ನಿರುದ್ಯೋಗದ ಪ್ರಮಾಣ ಅತ್ಯಂತ ಹೆಚ್ಚಿರುವುದು ಕಾಣುತ್ತಿದ್ದೇವೆ. ನಿರುದ್ಯೋಗ ಕೇವಲ ಒಂದು ಸಮಸ್ಯೆ ಆಗಿರುವುದಿಲ್ಲ. ನಿರುದ್ಯೋಗದ ಪರಿಣಾಮದಿಂದ ಸಮಾಜದಲ್ಲಿ ಕಳ್ಳತನ, ಆತ್ಮಹತ್ಯೆ, ವೈಶಾವಾಟಿಕೆ ಸೇರಿದಂತೆ ಅಪರಾಧ ಕೃತ್ಯಗಳ ಪ್ರಮಾಣ ಹೆಚ್ಚಳವಾಗುವವು. ಆದ್ದರಿಂದ ಉತ್ತಮ ಶಿಕ್ಷಣ ದೊರೆಯುವಲ್ಲಿ ಮತ್ತು ನಿರುದ್ಯೋಗ ತೊಡೆದು ಹಾಕುವಲ್ಲಿ ಸರ್ಕಾರ ಗಮನಹರಿಸಬೇಕು ಎಂದರು. ಸಂವಿಧಾನ ನಮ್ಮೆಲ್ಲರಿಗೂ ದೊರೆತ ಬಹು ದೊಡ್ಡ ವರದಾನವಾಗಿದೆ. ಸಂವಿಧಾನ ಬಹು ದೊಡ್ಡ ಅಸ್ತç, ಆ ಅಸ್ತçದ ಬಳಕೆಯಿಂದ ಸಮಾಜದಲ್ಲಿರುವ ಅನೇಕ ಅಸಮಾನತೆ, ಅಪಚಾರ ಮತ್ತು ಅನಾಚಾರಗಳನ್ನು ತೊಡೆದು ಹಾಕಲಾಗಿದೆ. ಸಂವಿಧಾನವನ್ನು ಎಲ್ಲರೂ ಓದಬೇಕು ಮತ್ತು ಸರಿಯಾಗಿ ಅರ್ಥೈಸಿಕೊಂಡು ಬಾಳನಲ್ಲಿ ರೂಢಿಸಿಕೊಳ್ಳಬೇಕು. ಆಗ ಮಾತ್ರ ರಾಷ್ಟçದ ಪ್ರಗತಿ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಮಾತನಾಡಿ, ಸಂಸ್ಥಾಪಕ ಕುಲಪತಿ ಪ್ರೊ. ಅನಂತನ್ ಅವರು ಸೇರಿದಂತೆ ಅನೇಕರ ಪರಿಶ್ರಮದಿಂದ ಆರ್‌ಸಿಯು ನಾಡಿನ ಪ್ರತಿಷ್ಠಿತ ಮತ್ತು ಅತಿ ದೊಡ್ಡ ವಿವಿ ಎಂದು ಖ್ಯಾತಿ ಪಡೆದಿದೆ. ಈ ಭಾಗದ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಯ ಭವಿಷ್ಯವನ್ನು ಉಜ್ವಲಗೊಳಿಸುವ ಮಹಾನ ಗುರಿಯೊಂದಿಗೆ ವಿವಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಆರ್‌ಸಿಯು ಕಳೆದ ೧೪ ವರ್ಷಗಳಲ್ಲಿ ಹಂತ ಹಂತವಾಗಿ ವರ್ಷದಿಂದ ವರ್ಷಕ್ಕೆ ಅನೇಕ ಮಹತ್ತರ ಯೋಜನೆ ಮತ್ತು ಪ್ರಗತಿಗಳನ್ನು ಸಾಧಿಸುತ್ತಾ ಸಾಗಿದೆ ಎಂದರು.
ಹಣಕಾಸು ಅಧಿಕಾರಿ ಎಂ. ಎ. ಸಪ್ನ, ಬುಡಾ ಅಧ್ಯಕ್ಷ ಚಿಂಚಣಿ, ಸಿಂಡಿಕೇಟ್ ಸದಸ್ಯರು, ಆಕ್ಯಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಯ ಬೋಧಕ ಸಿಬ್ಬಂದಿ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು. ಕುಲಸಚಿವರಾದ ಸಂತೋಷ ಕಾಮಗೌಡ ಸ್ವಾಗತಿಸಿದರು. ಡಾ. ಗಜಾನನ ನಾಯ್ಕ್ ನಿರೂಪಿಸಿದರು. ಮೌಲ್ಯಮಾಪನ ಕುಲಸಚಿವರಾದ ಪ್ರೊ. ರವೀಂದ್ರನಾಥ ಕದಂ ವಂದಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸದಾ ನನ್ನ ಬೆಂಬಲ ನೀಡುವೆನು- ಕು. ಪ್ರಿಯಾಂಕಾ ಜಾರಕಿಹೊಳಿ
ಮಾನ್ಯ ಲೋಕಸಭಾ ಸದಸ್ಯೆ ಪ್ರಿಯಾಂಕಾ ಜಾರಕಿಹೊಳಿ, ಮಾತನಾಡಿ, ನಾಡಿನ ಪ್ರತಿಷ್ಟಿತ ವಿಶ್ವವಿದ್ಯಾಲಯವಾದ ಆರ್‌ಸಿಯು ಪ್ರಗತಿಗೆ ಅವಶ್ಯವಿರುವ ಕಾರ್ಯಗಳನ್ನು ಮಾಡಲು ಸದಾ ಸಿದ್ಧನಿರುವೆನು. ವಿವಿಗೆ ಸಂಬAಧಿತ ಏನಾದರೂ ಕೆಲಸಗಳು ತಿಳಿಸಿದ್ದಲ್ಲಿ, ಅವುಗಳನ್ನು ಪ್ರಥಮ ಆದ್ಯತೆಯಲ್ಲಿ ಸಹಕರಿಸುವುದಾಗಿ ತಿಳಿಸಿದರು.
ಈ ಹಿಂದೆ ಅನೇಕ ಶ್ರಮದ ಫಲವಾಗಿ ಆರ್‌ಸಿಯು ವಿವಿ ನಮಗೆ ಈ ಭಾಗದಲ್ಲಿ ದೊರಕಿದೆ. ಆದ್ದರಿಂದ ಆರ್‌ಸಿಯು ಉನ್ನತಿಗೆ ನಾವೆಲ್ಲರೂ ಶ್ರಮಿಸೋಣ ಮತ್ತು ಮುಂದಿನ ಪೀಳಿಗೆಗೆ ಆರ್‌ಸಿಯುವನ್ನು ರಾಷ್ಟçದ ಅತ್ಯುತ್ತಮ ವಿವಿಯನ್ನಾಗಿಸಿ ಕೊಡೋಣ ಎಂದರು.