ಜಿಲ್ಲೆ

ಕೋರಮಂಗಲದಲ್ಲಿ ಜೋಯಾಲುಕ್ಕಾಸ್​ ಮಳಿಗೆ:ರಾಮಲಿಂಗಾರೆಡ್ಡಿ, ರಹೀಂಖಾನ್​ ಉದ್ಘಾಟನೆ

ಬೆಂಗಳೂರು:ಆಭರಣ ತಯಾರಿಕೆ ಹಾಗೂ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಜೋಯಾಲುಕ್ಕಾಸ್​ ಸಂಸ್ಥೆ, ಕೋರಮಂಗಲದಲ್ಲಿ ನೂತನ ಮಳಿಗೆಯನ್ನು ಶನಿವಾರ ತೆರೆದಿದೆ. ಸಚಿವರಾದ ರಾಮಲಿಂಗಾರೆಡ್ಡಿ, ರಹೀಂಖಾನ್​ ಉದ್ಘಾಟಿಸಿದರು. ನಗರದಲ್ಲಿ ಇದು 11ನೇ ಮಳಿಗೆಯಾಗಿದೆ.

ಮಳಿಗೆಯಲ್ಲಿ ಡೈಮೈಂಡ್​ ವೆಡ್ಡಿಂಗ್​ ಕಲೆಕ್ಷನ್​ ವಿಭಾಗದ ಪ್ರತಿ ಆಭರಣ ಅತ್ಯಂತ ಉತ್ತಮವಾಗಿದೆ. ಆಭರಣಗಳು ಗ್ರಾಹಕರಿಗೆ ಹೆಚ್ಚು ಆಪ್ತವಾಗಲಿದೆ. ವೈವಾಹಿಕ ಜೀವನಕ್ಕೂ ಮೆರಗು ನೀಡಲಿದೆ. ಜೋಯಾಲುಕ್ಕಾಸ್​ ಸಿಎಂಡಿ ಜೋಯ್​ ಆಲುಕ್ಕಾಸ್​ ಮಾತನಾಡಿ, "ಡೈಮಂಡ್​ ವೆಡ್ಡಿಂಗ್​' ಸಂಗ್ರಹ ಶಾಶ್ವತ ಪ್ರೀತಿಯ ಪ್ರತಿಕವಾಗಿದೆ. ಇದರೊಂದಿಗೆ ನಿತ್ಯಬದಲಾಗುವ ಫ್ಯಾಷನ್​, ನಾವಿನ್ಯತೆ, ಸಾಂಪ್ರದಾಯಿಕ ಕಲೆಗೆ ಪ್ರಾಧಾನ್ಯತೆ ನೀಡಲಾಗಿದೆ. ಆಭರಣಗಳನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ. ಅದ್ಭುತವಾದ ಆಭರಣ ಮಾರಾಟವು ಗಮನಾರ್ಹ ಗಮನ ಸೆಳೆದಿದೆ. ಆಕರ್ಷಕ ಕೊಡುಗೆಗಳನ್ನು ಗ್ರಾಹಕರು ಸದ್ಬಳಕೆ ಮಾಡಿಕೊಳ್ಳಬಹುದು ಎಂದರು.

ವೇದ ಟೆಂಪಲ್​ ಜ್ಯುವೆಲ್ಲರಿ, ಪೆಡ್​ ಡೈಮಂಡ್ಸ್​, ಎಲೆಗಂಜಾ ಪೋಲ್ಕಿ ಆಭರಣ, ಮಸಾಕಿ ಪರ್ಲ್ಸ್​ ಜೆನ್ನಿಯಾ ಟರ್ಕಿಶ್​ ಆಭರಣ, ಮಕ್ಕಳ ಆಭರಣ, ದಿನಿತ್ಯ ಧರಿಸುವ ಆಭರಣ, ಪೊಲ್ಕಿ, ಪುರಾತನ ವಿನ್ಯಾಸದ ಬಳೆಗಳು, ಸರಗಳು, ಮೋಪು ಚೈನ್​ಗಳು, ಪಚ್ಚಿ ಆಭರಣ, ಹಗುರ ತೂಕ, ಎತ್ನಿಕ್​, ಎಮರಾಲ್ಡ್​, ವಂಕೀ ಆಭರಣಗಳು ಹಾಗೂ ಬ್ರೇಸ್ಲೆಟ್​ಗಳಿವೆ. ಅನ್​ಕಟ್​ ಪೊಲ್ಕಿ ಆಭರಣ, ಜುಮುಕೀಸ್​, ಚಿಪ್ಪಾ ಆಭರಣಗಳು, ಸಿಗ್ನೀಟಿ ಬ್ರೇಸ್​ಲೆಟ್ಸ್​, ಬಳೆಗಳು,ನಾಗಾಸ್​ ಡಿಸೈನ್ಸ್​ಗಳಿವೆ. ಭಾರತ, ಯುಎಇ, ಸೌದಿ ಆರೇಬಿಯಾ, ಬಹ್ರೇನ್​, ಒಮನ್​, ಕುವೈತ್​, ಖತಾರ್​, ಸಿಂಗಾಪುರ, ಮಲೇಷಿಯಾ ಮತ್ತು ಇಂಗ್ಲೆಡ್​ ಸೇರಿ ಇತರೆ ದೇಶಗಳಲ್ಲಿ ಆಭರಣ ಮಳಿಗೆಗಳಿವೆ.